ಬೆಂಗಳೂರು:ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಪ್ರಕರಣ ಸಂಬಂಧ ಸದ್ಯ ಡಿಕೆಶಿ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕೇಸ್ ದಾಖಲಿಸಿದ್ದಾರೆ.
ಡಿ ಕೆ ಶಿವಕುಮಾರ್ಗೆ ಮತ್ತೊಂದು ಶಾಕ್: ಸಿಬಿಐ ಅಧಿಕಾರಿಗಳಿಂದ ಪ್ರಕರಣ ದಾಖಲು - ಡಿ ಕೆ ಶಿವಕುಮಾರ್ಗೆ ಮತ್ತೊಂದು ಶಾಕ್
ಡಿಕೆಶಿಗೆ ಸಂಬಂಧಿಸಿದ ಕರ್ನಾಟಕದ 9, ದೆಹಲಿಯಲ್ಲಿ 4 ಹಾಗೂ ಮುಂಬೈನಲ್ಲಿ ಒಂದು ಸ್ಥಳ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಸಿಬಿಐ ದಾಳಿ ನಡೆದಿದೆ. ಡಿಕೆಶಿ ವಿರುದ್ಧ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಕೆ ಶಿವಕುಮಾರ್
ಡಿಕೆಶಿಗೆ ಸಂಬಂಧಿಸಿದ ಕರ್ನಾಟಕದ 9, ದೆಹಲಿಯಲ್ಲಿ 4 ಹಾಗೂ ಮುಂಬೈನಲ್ಲಿ ಒಂದು ಸ್ಥಳ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಇಂದು ದಾಳಿ ನಡೆದಿದೆ. ಸದ್ಯ ಹೈಕೋರ್ಟ್ ತಡೆಯಾಜ್ಞೆ ಇರುವ ಕಾರಣ ಪ್ರಾಥಮಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕೃತವಾಗಿ ತನಿಖೆ ನಡೆಸಿ ಮನೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ಸಿಬಿಐ ಅಧಿಕಾರಿಗಳು ತೊಡಗಿದ್ದಾರೆ.
ಸದ್ಯ ಡಿ ಕೆ ಶಿವಕುಮಾರ್ ಮನೆಯಲ್ಲಿ ಸಿಬಿಐ ಅಧಿಕಾರಿಗಳು 50 ಲಕ್ಷ ರೂ. ಅಕ್ರಮಹಣ ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.