ಕರ್ನಾಟಕ

karnataka

ETV Bharat / state

ಗೂಗಲ್‌ನಲ್ಲಿ ಸಿದ್ದಾರ್ಥ್ ನಾಪತ್ತೆ ಪ್ರಕರಣ ಜಾಲಾಡಿದ ನೆಟ್ಟಿಗರು!

ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಭಾರಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಮಾಹಿತಿಗಾಗಿ ಜನರು ಗೂಗಲ್‌ ಮತ್ತು ಟ್ವಿಟ್ಟರ್‌ನಲ್ಲಿ ಭಾರಿ ಹುಡುಕಾಟ ನಡೆಸಿದ್ದಾರೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್

By

Published : Jul 30, 2019, 6:00 PM IST

Updated : Jul 30, 2019, 6:16 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನೆಟ್ಟಿಗರು ಗೂಗಲ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್
ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್

ಕೆಫೆ ಕಾಫಿ ಡೇ ಸಂಸ್ಥಾಪಕ ನಾಪತ್ತೆಯಾದ ಬಗ್ಗೆ ಸೋಮವಾರ ತಡ ರಾತ್ರಿ ಮಾಹಿತಿ ಹೊರಬಿದ್ದಿತ್ತು. ಬೆಳಿಗ್ಗೆ 6 ಗಂಟೆಯ ನಂತರ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಲು ಶುರುವಾದ ಬಳಿಕ ದೇಶವ್ಯಾಪಿ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಬೆಳಿಗ್ಗೆ 10 ಗಂಟೆಗಾಗಲೇ ಈ ಶೋಧ ಗರಿಷ್ಟ ಸಂಖ್ಯೆ ತಲುಪಿದೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್

ಜನರು ವಿ.ಜಿ.ಸಿದ್ದಾರ್ಥ ಎಂದಷ್ಟೇ ಅಲ್ಲದೆ ಸಿಸಿಡಿ, ಕೆಫೆ ಕಾಫಿ ಡೇ ಮಾಲೀಕ, ಎಸ್‌.ಎಂ.ಕೃಷ್ಣ, ಸಿದ್ದಾರ್ಥ ಅಳಿಯ, ಕಾಫಿ ಡೇ, ಸಿಸಿಡಿ ಸಂಸ್ಥಾಪಕ, ಕೆಫೆ ಕಾಫಿ ಡೇ ಎಂದೆಲ್ಲಾ ಕೀ ವರ್ಡ್‌ಗಳನ್ನು ಹಾಕಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನು ಪ್ರಕರಣದ ಕುರಿತಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಜನರು ಮಾಹಿತಿಗಾಗಿ ಗೂಗಲ್‌ ನಲ್ಲಿ ಸರ್ಚ್‌ ಮಾಡಿದ್ದು ಈ ಬಗ್ಗೆ ಕರ್ನಾಟದಲ್ಲೇ ಹೆಚ್ಚು ಜನರು ಶೋಧಿಸಿದ್ದಾರೆ. ಇದನ್ನು ಹೊರತಾಗಿ ಮಹಾರಾಷ್ಟ್ರ ಗೋವಾ, ತಮಿಳುನಾಡು ಹಾಗು ರಾಜಧಾನಿ ದೆಹಲಿಯಲ್ಲೂ ಜನರು ಇಂಟರ್‌ನೆಟ್‌ ಮೊರೆ ಹೋಗಿದ್ದಾರೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್

ಅಷ್ಟೇ ಅಲ್ಲ, ಸಿದ್ದಾರ್ಥ್ ಅವರ ಪತ್ನಿ ಎಸ್‌.ಎಂ.ಕೃಷ್ಣ ಅವರ ಮಗಳಾಗಿದ್ದು, ಅವರ ಕುರಿತೂ ಸಹ ಜನ ಸರ್ಚ್‌ ಮಾಡಿದ್ದಾರೆ. ವಿ.ಜಿ.ಸಿದ್ದಾರ್ಥ್ ಪತ್ನಿ, ಮಾಳವಿಕಾ ಸಿದ್ದಾರ್ಥ್, ಮಾಳವಿಕಾ ಕೃಷ್ಣ, ಸಿದ್ಧಾರ್ಥ ನಾಪತ್ತೆ, ವಿ.ಜಿ.ಸಿದ್ದಾರ್ಥ ನಾಪತ್ತೆ, ಸಿದ್ದಾರ್ಥ್‌ ಕುಟುಂಬ ಚಿತ್ರ, ವಿ.ಜಿ ಸಿದ್ದಾರ್ಥ ಸಾವು, ವಿ.ಜಿ.ಸಿದ್ದಾರ್ಥ ಆತ್ಮಹತ್ಯೆ ಎಂದೆಲ್ಲಾ ಜಾಲಾಡಿದ್ದಾರೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್

ಟ್ವಿಟ್ಟರ್‌ನಲ್ಲಿಯೂ ವಿ.ಜಿ.ಸಿದ್ದಾರ್ಥ್ ಹಾಗೂ ಕೆಫೆ ಕಾಫಿ ಡೇ ವಿಶ್ವದಾದ್ಯಂತ ಟಾಪ್‌ ಟ್ರೆಂಡ್‌ ಪಟ್ಟಿಯಲ್ಲಿದೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್
Last Updated : Jul 30, 2019, 6:16 PM IST

ABOUT THE AUTHOR

...view details