ಬೆಂಗಳೂರು: ಒಂದರಿಂದ ಹತ್ತನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಮತ್ತು ಆರರಿಂದ ಹತ್ತನೇ ತರಗತಿಯ ಆದರ್ಶ ಶಾಲೆಗಳ 74 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಗಾಗಿ 153.91 ಕೋಟಿ ರೂಗಳ ಯೋಜನೆಗೆ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಲಾಗಿದೆ.
ಇದೇ ವೇಳೆ ಈ ಬಾರಿಯ ಬಜೆಟ್ ನಲ್ಲಿ ವಿತ್ತೀಯ ಹೊಣೆಗಾರಿಕೆ 25% ಮೀರಿದ್ದು, ಇದಕ್ಕೆ ಪೂರಕವಾಗಿ ಕರ್ನಾಟಕ ಹಣಕಾಸು ಹೊಣೆಗಾರಿಕೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಈ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನ ಗಳು
- ಕರ್ನಾಟಕ ಸಹಕಾರಿ ಸೊಸೈಟಿ ತಿದ್ದುಪಡಿ ವಿಧೇಯಕ ಅನುಮೋದನೆ
- ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
- ಲೋಕಾಯುಕ್ತಕ್ಕೆ ಗುತ್ತಿಗೆ ಆಧಾರದಲ್ಲಿ 12 ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಭರ್ತಿಗೆ ಅನುಮೋದನೆ
- ಅಕ್ರಮ ಗಣಿ ಪ್ರಕಕರಣಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ರಚಿಸಲಾಗಿದ್ದ ಎಸ್ಐಟಿಯ ಅವಧಿ ವಿಸ್ತರಣೆ
- 1120 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 2032 ಆರೋಗ್ಯ ಮತ್ತು ಆರೈಕೆ ಕೇಂದ್ರಗಳಲ್ಲಿ ಟೆಲಿ ಮೆಡಿಸಿನ್ ಸೇವೆಗಾಗಿ ಐಸಿಟಿ ಉಪಕರಣ ಖರೀದಿಗೆ 18.96 ಕೋಟಿಗೆ ಆಡಳಿತಾತ್ಮಕ ಅನುಮೋದನೆ
- ಕರ್ನಾಟಕ ಬಂಧಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕಕ್ಕೆ ಅನುಮೋದನೆ
- ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ( ಕೇಡರ್ ಹಾಗೂ ನೇಮಕಾತಿ) ನಿಯಮಕ್ಕೆ ಅನುಮೋದನೆ