ಬೆಂಗಳೂರು : ಮಸ್ಕಿ ಕ್ಷೇತ್ರದ ಜವಾಬ್ದಾರಿ ಹೊತ್ತಿದ್ದೆ. ಸೋಲಿನ ನೈತಿಕ ಹೊಣೆಯನ್ನು ನಾನೂ ಹೊರುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಪ್ರತಾಪ್ ಗೌಡ ಪಾಟೀಲ್ರ ಮುಂದಿನ ಭವಿಷ್ಯ ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ ಎಂದರು.
ಮಸ್ಕಿ ಸೋಲು ನಿರೀಕ್ಷೆ ಮಾಡಿರಲಿಲ್ಲ. ನಾವು ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಿದ್ದೆವು. ಆದರೂ ಸೋಲಾಗಿದೆ ಎಂದರು. ಅಸ್ಸೋಂ, ಪುದುಚೆರಿಯಲ್ಲಿ ಬಿಜೆಪಿ ಗೆದ್ದಿದೆ. ಪಶ್ಚಿಮ ಬಂಗಾಳದಲ್ಲಿ ನಾವು ಅಂದುಕೊಂಡ ಮಟ್ಟದಲ್ಲಿ ಸಂಖ್ಯೆ ಬರಲಿಲ್ಲ.
ಆದರೂ 70ಕ್ಕೂ ಹೆಚ್ಚು ಸ್ಥಾನ ಗೆದ್ದು ದೊಡ್ಡ ಸಾಧನೆ ಮಾಡಿದ್ದೇವೆ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯುವಲ್ಲಿ ಸಫಲರಾಗಿದ್ದೇವೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸಿದೆ, ಬಸವಕಲ್ಯಾಣದಲ್ಲಿ ಕೂಡ ಗೆದ್ದಿದ್ದೇವೆ. ಆದರೆ, ಮಸ್ಕಿಯಲ್ಲಿ ಹೀಗೆ ಫಲಿತಾಂಶ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮಸ್ಕಿಯಲ್ಲಿ ಹಿನ್ನಡೆ ಆಗಿರಬಹುದು, ಆದರೂ ನಾವು ಧೃತಿಗೆಡಲ್ಲ, ಕಾರ್ಯಕರ್ತರು ಧೃತಿಗೆಡೋದು ಬೇಡ ಎಂದರು.
ಮಸ್ಕಿ ಕ್ಷೇತ್ರದ ಸೋಲನ್ನು ನೈತಿಕವಾಗಿ ನಾನೂ ಸಹ ಹೊರುತ್ತೇನೆ, ನಾನು ಕ್ಷೇತ್ರದ ಉಸ್ತುವಾರಿಯಾಗಿದ್ದೆ, ಮಸ್ಕಿ ಸೋಲು ನಿರೀಕ್ಷೆ ಮಾಡಿರಲಿಲ್ಲ. ನಾವು ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಿದ್ದೆವು. ಆದರೂ ಸೋಲಾಗಿದೆ. ಮುಂದಿನ ದಿನಗಳಲ್ಲಿ ಸೋಲಿನ ಕಾರಣ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು.