ಕರ್ನಾಟಕ

karnataka

ETV Bharat / state

ಅಪಾರ್ಟ್​ಮೆಂಟ್​ ಖರೀದಿ ಮುದ್ರಾಂಕ ಶುಲ್ಕ ಶೇ 3ಕ್ಕೆ ಇಳಿಕೆ; ಯಾರಿಗೆಲ್ಲ ಅನುಕೂಲ? - ಕರ್ನಾಟಕ ಬಿಜೆಪಿ ಸರ್ಕಾರದ ಬಜೆಟ್

ಬೆಂಗಳೂರಿನಲ್ಲಿ ₹50 ಲಕ್ಷದಿಂದ ಮೇಲ್ಪಟ್ಟ ಮಧ್ಯಮ ದರ್ಜೆಯ ಮನೆ ಖರೀದಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಗೆ ಸರ್ಕಾರದ ಈ ಘೋಷಣೆ ಸಹಕಾರಿ ಆಗುವುದಿಲ್ಲ, ಇನ್ನು ಶೇ 5ರಷ್ಟು ಮುದ್ರಾಂಕ ಶುಲ್ಕ ಹೊಸ ಮನೆ ಖರೀದಿಗೆ ಅನ್ವಯಿಸಲಿದೆ.

bumper-on-budget-for-new-flat-buyers-in-bangalore
ಹೊಸ ಫ್ಲಾಟ್ ಖರೀದಿದಾರರಿಗೆ ಬಜೆಟ್​​ನಲ್ಲಿ ಬಂಪರ್​

By

Published : Mar 8, 2021, 6:05 PM IST

Updated : Mar 8, 2021, 6:56 PM IST

ಬೆಂಗಳೂರು: ರಾಜ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೈಗೆಟಕುವ ದರದಲ್ಲಿ ಮನೆಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಲು, ₹35 ಲಕ್ಷದಿಂದ ₹45 ಲಕ್ಷ ವರೆಗಿನ ಮೌಲ್ಯದ ಅಪಾರ್ಟ್​​ಮೆಂಟ್​​​​ಗಳ ಮೊದಲನೇ ನೋಂದಾವಣೆಗೆ ಮುದ್ರಾಂಕ ಶುಲ್ಕ ಶೇ 5 ರಿಂದ ಶೇ 3ಕ್ಕೆ ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಆದರೆ ಈ ಘೋಷಣೆ ಕೆಲವೇ ಪ್ಲ್ಯಾಟ್​ಗಳಿಗೆ ಸೀಮಿತವಾಗಲಿದೆ ಎಂದು ರಿಯಲ್ ಎಸ್ಟೇಟ್ ವಲಯ ಅಭಿಪ್ರಾಯಪಟ್ಟಿದೆ.

ANAROCK ಸರ್ವೆ ಪ್ರಕಾರ ನಗರದಲ್ಲಿ ಪ್ರಸ್ತುತ 59,350 ಫ್ಲ್ಯಾಟ್​ಗಳು ಮಾರಾಟವಾಗದೆ ಉಳಿದಿವೆ. ಅದರಲ್ಲಿ ಶೇ 24ರಷ್ಟು ಫ್ಲ್ಯಾಟ್​ಗಳು ₹45 ಲಕ್ಷದ ಮೌಲ್ಯದೊಳಗೆ ಒಳಪಡುತ್ತವೆ. ಇನ್ನು ಶೇ 64ರಷ್ಟು ಫ್ಲ್ಯಾಟ್​​​ಗಳು ₹45 ಲಕ್ಷದಿಂದ ₹1.5 ಕೋಟಿ ಪರಿಮಿತಿಯಲ್ಲಿವೆ. ಒಟ್ಟಾರೆ 14,244 ಫ್ಲ್ಯಾಟ್​​​​​ಗಳು ಮಾತ್ರ ಸರ್ಕಾರದ ಘೋಷಣೆಯಿಂದ ಲಾಭ ಪಡೆಯಲಿವೆ.

ಮಹಾರಾಷ್ಟ್ರದಲ್ಲಿ ಎಲ್ಲಾ ದರ್ಜೆ ಗೃಹ ಖರೀದಿಗೆ ಮುದ್ರಾಂಕ ಶುಲ್ಕ ಕಡಿತ ಮಾಡಿದ ಹಿನ್ನೆಲೆ ರಿಯಲ್ ಎಸ್ಟೇಟ್ ಉದ್ಯಮ ಪ್ರಗತಿ ಕಾಣುತ್ತಿವೆ. ಬೆಂಗಳೂರಿನಲ್ಲಿ ₹50 ಲಕ್ಷದಿಂದ ಮೇಲ್ಪಟ್ಟ ಮಧ್ಯಮ ದರ್ಜೆಯ ಮನೆ ಖರೀದಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಗೆ ಸರ್ಕಾರದ ಈ ಘೋಷಣೆ ಸಹಕಾರಿ ಆಗುವುದಿಲ್ಲ, ಇನ್ನು ಶೇ 5ರಷ್ಟು ಮುದ್ರಾಂಕ ಶುಲ್ಕ ಹೊಸ ಮನೆ ಖರೀದಿಗೆ ಅನ್ವಯಿಸಲಿದೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ಕ್ರೆಡಾಯ್ ಅಧ್ಯಕ್ಷ ಸುರೇಶ್ ಹರಿ, ಈ ಘೋಷಣೆಯಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ನಿರೀಕ್ಷೆ ಇರಲು ಸಾಧ್ಯವಿಲ್ಲ, ನಗರದ ಹೊರವಲಯದಲ್ಲಿ ಕೆಲ ಫ್ಲ್ಯಾಟ್​​​​​ ಮಾರಾಟಕ್ಕೆ ಇದು ಸಹಕಾರಿ ಆಗಲಿದೆ. ಮನೆಗಳ ಮಾರಾಟದ ನೋಂದಣಿ ಮತ್ತು ಶುಲ್ಕ ದರ ಇನ್ನೂ ಕಡಿಮೆ ಮಾಡಬೇಕು ಎಂದು ಮತ್ತೆ ಬೇಡಿಕೆ ಮುಂದಿಟ್ಟರು.

ಈ ಹಿಂದೆ ಶೇ 3ರಷ್ಟು ನೋಂದಣಿ ಶುಲ್ಕ ₹25 ಲಕ್ಷದ ಫ್ಲ್ಯಾಟ್​ಗಳಿಗೆ ಮಾತ್ರ ಸೀಮಿತವಾಗಿತ್ತು, ಈಗ ಸರ್ಕಾರ ₹45 ಲಕ್ಷದ ಫ್ಲ್ಯಾಟ್​​​ವರೆಗೆ ವಿಸ್ತರಣೆ ಮಾಡಿದೆ.

ಇದನ್ನೂ ಓದಿ:ರಾಜ್ಯ ಬಜೆಟ್: ಹೆಚ್​ಡಿಕೆ ಕ್ಷೇತ್ರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ

Last Updated : Mar 8, 2021, 6:56 PM IST

ABOUT THE AUTHOR

...view details