ಬೆಂಗಳೂರು :ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿದ ಪರಿಣಾಮ ಕೆಲ ಕಾಲ ಸಾರ್ವಜನಿಕರು ಆತಂಕ್ಕೊಳಗಾದ ಘಟನೆ ಶಿವಾಜಿನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ ಕುಸಿತ : ಮಾಲೀಕನ ವಿರುದ್ಧ ದೂರು - kannadanews
ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿದ ಪರಿಣಾಮ ಕೆಲ ಕಾಲ ಸಾರ್ವಜನಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ.
ಶಿವಾಜಿನಗರದ ಬಿಸ್ಮಿಲ್ಲಾ ಟೀ ಶಾಪ್ ಮೇಲಿರುವ ಒಂದನೇ ಅಂತಸ್ತಿನ ಗೋಡೆ ನಿನ್ನೆ ಏಕಾಏಕಿ ಕುಸಿತ ಕಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನ ತೆರವುಗೊಳಿಸುವಂತೆ ಒಂದು ವರ್ಷದ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ರು. ಆದರೆ, ಕಟ್ಟಡ ಮಾಲೀಕ ಇಕ್ಬಾಲ್ ತೆರವು ಮಾಡಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಬಿಬಿಎಂಪಿ ಇಂಜಿನಿಯರ್, ಶಾಸಕರಾದ ರೋಷನ್ ಬೇಗ್ ಆಗಮಿಸಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದು, ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.