ಕರ್ನಾಟಕ

karnataka

ETV Bharat / state

ಮೊದಲ‌ ಬಾರಿಗೆ ವಿತ್ತೀಯ ಹೊಣೆಗಾರಿಕೆ ಮಿತಿ ಮೀರಿದ ಬಜೆಟ್: 71,332 ಕೋಟಿ ರೂ. ಸಾಲಕ್ಕೆ‌ ಮೊರೆ! - ಕರ್ನಾಟಕ ಬಜೆಟ್‌ ಲೈವ್

2021- 22ರ ಕೊನೆಯಲ್ಲಿ ಒಟ್ಟು 4,57,899 ಕೋಟಿ ರೂ. ಹೊಣೆಗಾರಿಕೆ ಅಂದಾಜಿಸಲಾಗಿದೆ. ರಾಜಸ್ವ ಕೊರತೆ 15,134 ಕೋಟಿ ರೂ. ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 59,240 ಕೋಟಿ ರೂ.ಗಳಾಗುತ್ತದೆಂದು ನಿರೀಕ್ಷಿಸಲಾಗಿದೆ.

budget
budget

By

Published : Mar 8, 2021, 3:28 PM IST

ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ 2,46,207 ಕೋಟಿ ರೂ. ವೆಚ್ಚದ ಮುಂಗಡ ಪತ್ರ ಮಂಡಿಸಿದ್ದು, ಮೊದ‌ಲ ಬಾರಿಗೆ ವಿತ್ತೀಯ ಹೊಣೆಗಾರಿಕೆ ಮಿತಿ ಮೀರಿ ಬಜೆಟ್ ಮಂಡಿಸಲಾಗಿದೆ.

2021- 22ರ ಕೊನೆಯಲ್ಲಿ ಒಟ್ಟು 4,57,899 ಕೋಟಿ ರೂ. ಹೊಣೆಗಾರಿಕೆ ಅಂದಾಜಿಸಲಾಗಿದೆ. ರಾಜಸ್ವ ಕೊರತೆ 15,134 ಕೋಟಿ ರೂ. ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 59,240 ಕೋಟಿ ರೂ.ಗಳಾಗುತ್ತದೆಂದು ನಿರೀಕ್ಷಿಸಲಾಗಿದ್ದು, ರಾಜ್ಯದ ಆಂತರಿಕ ಉತ್ಪನ್ನದ 3.48ರಷ್ಟಾಗಿರುತ್ತದೆ.

2021-22ರ ಕೊನೆಯಲ್ಲಿ 4,57,899 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ. 26.9ರಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆ ಆದಾಯ ಕೊರತೆ ಹೆಚ್ಚಾಗಿದ್ದು, ಸಾಲದ ಮೊರೆ ಹೋಗಿರುವುದರಿಂದ ನಿರೀಕ್ಷೆಯಂತೆ ವಿತ್ತೀಯ ಹೊಣೆಗಾರಿಕೆ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ.

ವಿತ್ತೀಯ ಹೊಣೆಗಾರಿಕೆಯ ಅಧಿನಿಯಮ 2002ರ ಪ್ರಕಾರ ಹೊಣೆಗಾರಿಕೆ ಮಿತಿ 25% ಇದ್ದು, ಈ ಬಾರಿ 26.9%ಗೆ ಹೋಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

2021-22 ಸಾಲಿನಲ್ಲಿ ಜಿ.ಎಸ್.ಟಿ ನಷ್ಟ ಪರಿಹಾರ ಒಳಗೊಂಡಂತೆ ರಾಜ್ಯದ ರಾಜಸ್ವ ತೆರಿಗೆ 1,24,202 ಕೋಟಿ ರೂ. ನಿರೀಕ್ಷೆ ಇದ್ದು, ಈ ಬಾರಿ ತೆರಿಗೇತರ ರಾಜಸ್ವ ಸಂಗ್ರಹದ ನಿರೀಕ್ಷೆ 8,258 ಕೋಟಿ ರೂ. ಅಂದಾಜಿಸಲಾಗಿದೆ. 2021-22 ಸಾಲಿನಲ್ಲಿ ಕೇಂದ್ರದ ತೆರಿಗೆ ರೂಪದಲ್ಲಿ 24,273 ಕೋಟಿ ಬರುವ ನಿರೀಕ್ಷೆ ಇದೆ. ಕೇಂದ್ರದ ಸಹಾಯಧನದ ನಿರೀಕ್ಷೆ 15,538 ಕೋಟಿ ರೂ. ಅಂದಾಜಿಸಲಾಗಿದೆ. ಈ ಬಾರಿ ಬಜೆಟ್ ವೆಚ್ಚ ಸರಿದೂಗಿಸಲು ಒಟ್ಟು 71,332 ಕೋಟಿ ರೂ. ಸಾಲ ಮಾಡಲಿದೆ.

ಹೊಸ ತೆರಿಗೆ ಹಾಕದ ಸಿಎಂ:

ಸಿಎಂ ಈ ಬಾರಿ ರಾಜ್ಯದ ಜನರ ಮೇಲೆ ಯಾವುದೇ ತೆರಿಗೆ ಹೊರೆ ಹಾಕಿಲ್ಲ. ಕೋವಿಡ್ ಹಿನ್ನೆಲೆ ರಾಜ್ಯದ ಜನರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವುದರಿಂದ ತೆರಿಗೆ ಭಾರ ಹಾಕದಿರಲು ನಿರ್ಧರಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್ ಮೇಲೆ ಮಾರಾಟ ತೆರಿಗೆ ಹಾಕದಿರಲು ನಿರ್ಧರಿಸಿದ್ದಾರೆ. ಜೊತೆಗೆ ಅಬಕಾರಿ ತೆರಿಗೆನೂ ಹೆಚ್ಚಿಸದಿರಲು ನಿರ್ಧರಿಸಿದ್ದಾರೆ.

ತೆರಿಗೆ ಸಂಗ್ರಹದ ಗುರಿ ಏನು?

ವಾಣಿಜ್ಯ ತೆರಿಗೆ ಸಂಗ್ರಹ ಗುರಿ 76,473 ಕೋಟಿ ರೂ‌. ಇದ್ದು, ಮುದ್ರಾಂಕ‌ ಮತ್ತು ನೋಂದಣಿ ಶುಲ್ಕ ಸಂಗ್ರಹ ಗುರಿ 12,655 ಕೋಟಿ ರೂ. ಇದೆ. ಅಬಕಾರಿ ಆದಾಯ ಸಂಗ್ರಹ ಗುರಿ 24,580 ಕೋಟಿ ರೂ. ಇದ್ದು, ಮೋಟಾರು ವಾಹನ ತೆರಿಗೆ ಸಂಗ್ರಹ ಗುರಿ 7,515 ಕೋಟಿ ರೂ. ಇದೆ.

ABOUT THE AUTHOR

...view details