ಕರ್ನಾಟಕ

karnataka

ETV Bharat / state

ದೇವದುರ್ಗದ ಅಡವಿ ಲಿಂಗೇಶ್ವರ ಸನ್ನಿಧಿಗೆ ತೆರಳಿದ್ರು ಬಿಎಸ್​ವೈ

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ರಾಯಚೂರಿನ ದೇವದುರ್ಗಕ್ಕೆ ತೆರಳಿದ್ದಾರೆ. ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆಯಾಗುತ್ತಿದ್ದಂತೆ ಬಿ.ಎಸ್ ಯಡಿಯೂರಪ್ಪ ದೇವದುರ್ಗಕ್ಕೆ ಧಾರ್ಮಿಕ ಕಾರ್ಯ ನಿಮಿತ್ಯ ತೆರಳಿದರು. ದೇವದುರ್ಗದ ವೀರಗೋಡುವಿನ ಅಡವಿ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

By

Published : Feb 7, 2019, 6:41 PM IST

ಬೆಂಗಳೂರು/ ರಾಯಚೂರು: ರಾಜ್ಯ ಬಜೆಟ್ ಅಧಿವೇಶನ ಗದ್ದಲ, ಗೊಂದಲದ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಧಾರ್ಮಿಕ ಕ್ಷೇತ್ರದ ಮೊರೆ ಹೋಗಿದ್ದು, ಅಡವಿ ಲಿಂಗೇಶ್ವರನ ಸನ್ನಿಧಿಗೆ ತೆರಳಿದ್ದಾರೆ.

ಬಿಡುವಿಲ್ಲದ ಸಮುದಲ್ಲಿಯೂ ಬಿಎಸ್​ವೈ ಮಾಡುತ್ತಿರುವ ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ನಾಳೆ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಬಿಡದ ಬಿಜೆಪಿ ಸದನದಲ್ಲಿ ಗದ್ದಲವೆಬ್ಬಿಸಿದ್ದು ನಾಳೆಯ ಬಜೆಟ್ ಮಂಡ‌ನೆ ಸಮಯದಲ್ಲೂ ಗದ್ದಲ ಮುಂದುವರೆಯುವ ಲಕ್ಷಣ ಕಾಣುತ್ತಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ರಾಯಚೂರಿನ ದೇವದುರ್ಗಕ್ಕೆ ತೆರಳಿದ್ದಾರೆ. ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆಯಾಗುತ್ತಿದ್ದಂತೆ ಬಿ.ಎಸ್ ಯಡಿಯೂರಪ್ಪ ದೇವದುರ್ಗಕ್ಕೆ ಧಾರ್ಮಿಕ ಕಾರ್ಯ ನಿಮಿತ್ಯ ತೆರಳಿದರು. ದೇವದುರ್ಗದ ವೀರಗೋಡುವಿನ ಅಡವಿ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಫೆಬ್ರವರಿ 19 ರಂದು ಅಡವಿಲಿಂಗೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು,1.96 ಲಕ್ಷ ಭಕ್ತರಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯಲಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನವನ್ನು ಆಯೋಜಕರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಯಡಿಯೂರಪ್ಪ ಭೇಟಿ ನೀಡಿದ್ದಾರೆ ಎನ್ನಲಾಗ್ತಿದೆ.

ರಾಜಕೀಯ ಅಸ್ಥಿರತೆಯಂತಹ ಸನ್ನಿವೇಶ ನಿರ್ಮಾಣ ಆಗಿರುವ ವೇಳೆ ಯಡಿಯೂರಪ್ಪ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿರುವುದು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ABOUT THE AUTHOR

...view details