ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ ರಾಜಭವನದ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭ; ರಾಜಭವನದ ಸುತ್ತ ಖಾಕಿ ಸರ್ಪಗಾವಲು - ಬೆಂಗಳೂರು, ಬಿ.ಎಸ್.ಯಡಿಯೂರಪ್ಪ, ಪ್ರಮಾಣವಚನ ಸ್ವೀಕಾರ, ನೂತನ ಮುಖ್ಯಮಂತ್ರಿ, ರಾಜಭವನ, ಕನ್ನಡ ವಾರ್ತೆ, ಈಟಿವಿ ಭಾರತ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಹಿನ್ನಲೆ ರಾಜಭವನದ ಸುತ್ತ ಮುತ್ತ ಖಾಕಿ ಸರ್ಪಗಾವಲು ಹಾಕಲಾಗಿದ್ದು, ನಗರದ ಎಲ್ಲಾ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಭದ್ರತೆಯ ಉಸ್ತುವಾರಿಯನ್ನು ಸ್ವತಃ ಹಿರಿಯ ಅಧಿಕಾರಿಗಳೇ ವಹಿಸಿಕೊಂಡಿದ್ದು, ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬೆಂಗಳೂರು ಹೆಚ್ಚುವರಿ ಪೋಲಿಸ್ ಆಯುಕ್ತ ಉಮೇಶ್ ಕುಮಾರ್, ದಕ್ಷಿಣ ವಿಭಾಗದ ಡಿಸಿಪಿಗಳಾದ ರೋಹಿಣಿ ಸೆಪಟ್, ಇಷಾ ಪಂತ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಸೆಂಟ್ರಲ್ ವಿಭಾಗ ಡಿಸಿಪಿ ಚಂದ್ರಗುಪ್ತ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ರಾಹುಲ್ ಕುಮಾರ್ ಭದ್ರತೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ರಾಜಭವನದಿಂದ ಕ್ಯಾಪಿಟಲ್ ಹೋಟೆಲ್ ವರೆಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸಿಲಿಕಾನ್ ಸಿಟಿಯ ಎಲ್ಲಾ ವಿಭಾಗದ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ , ಕಾನ್ಸ್ಟೇಬಲ್, ಹೋಂ ಗಾರ್ಡ್, ಹೊಯ್ಸಳ, ಕೆ.ಎಸ್.ಆರ್.ಪಿ ತುಕಡಿ, ಕ್ಷೀಪ್ರ ಕಾರ್ಯಪಡೆ, ಬಿಎಂಟಿಸಿ ಬಸ್ ಗಳು ರಾಜಭವನ ಬಳಿ ಮೊಕ್ಕಂ ಹೂಡಿದ್ದಾರೆ. ಸಂಪೂರ್ಣ ಖಾಕಿ ಕಣ್ಗಾವಲು ಇಡಲಾಗಿದೆ.
TAGGED:
security