ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ: ಬಿಎಸ್​​ ಯಡಿಯೂರಪ್ಪ ವಾಗ್ದಾಳಿ - ರಾಜ್ಯ ಸರ್ಕಾರ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ

By

Published : Apr 5, 2019, 12:04 PM IST

Updated : Apr 5, 2019, 12:43 PM IST

2019-04-05 11:56:11

ಕೇಂದ್ರ ಸರ್ಕಾರದ ಸಾಧನೆಗಳನ್ನ ಬಿಚ್ಚಿಟ್ಟ ಮಾಜಿ ಸಿಎಂ

  • ಪ್ರೆಸ್​​ ಕ್ಲಬ್​​ನಲ್ಲಿ ಬಿಎಸ್​​ ಯಡಿಯೂರಪ್ಪ ಸುದ್ದಿಗೋಷ್ಠಿ
  • ಕೇಂದ್ರ ಸರ್ಕಾರದ ಸಾಧನೆಗಳನ್ನ ಬಿಚ್ಚಿಡುತ್ತಿರುವ ಬಿಎಸ್​​ವೈ
  • ಬಡವರು, ರೈತರು, ದೀನದಲಿತರಿಗೆ ಮೋದಿ ಸರ್ಕಾರ ಭಾರಿ ಕೊಡುಗೆ ನೀಡಿದೆ
  • ಭಾರತದ ಅಭಿವೃದ್ಧಿ ದರ ಹೆಚ್ಚಳವಾಗಿದೆ. ಇದು ಅಭಿವೃದ್ಧಿ ಅಲ್ಲವೇ
  • 2018 ರಲ್ಲಿ ವಿದೇಶಿ ವ್ಯಾಪಾರ ದ್ವಿಗುಣಗೊಂಡಿದೆ: ಬಿಎಸ್​ವೈ
  • ಹಣದುಬ್ಬರ ಬೆಲೆ ಸತತವಾಗಿ ಇಳಿಕೆ ಕಾಣುತ್ತಿದೆ.
  • ತಲಾ ಆದಾಯದಲ್ಲಿ ಭಾರಿ ಏರಿಕೆ ಆಗಿದೆ
  • ಜಿಡಿಪಿ ದರ ಶೇ 7.3 ರದರದಲ್ಲಿ ಬೆಳವಣಿಗೆ ಕಾಣುತ್ತಿದೆ
  • ಷೇರುಪೇಟೆ 39 ಸಾವಿರ ಕೋಟಿಗೆ ಏರಿಕೆ ಆಗಿದೆ
  • ಬಾಹ್ಯಾಕಾಶದಲ್ಲಿ  ಭಾರತದ ಸಾಧನೆ ಏರುಮಟ್ಟದಲ್ಲೇ ಮುಂದುವರೆದಿದೆ
  • ಅಮೆರಿಕ, ರಷ್ಯಾ, ಚೀನಾಗೆ ನಾವು ಬಾಹ್ಯಾಕಾಶದಲ್ಲಿ ಸವಾಲು ಹಾಕಿದ್ದೇವೆ
  • ಮೋದಿ ಅವರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ ದ್ವಿಗುಣಗೊಂಡಿದೆ
  • ಸಾಮಾನ್ಯ ಜನರಿಗೆ ತಲಾ 6 ಸಾವಿರ ನೀಡುವ ಮೋದಿ ಸರ್ಕಾರದ ನಿರ್ಧಾರ ಐತಿಹಾಸಿಕ
  • ಐಟಿ ರಿಟರ್ನ್​ ಸಲ್ಲಿಸಲು ಆದಾಯ ತೆರಿಗೆ ಇಳಿಕೆ ಮಾಡಲಾಗಿದೆ
  • ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸಲು ವಿಫಲವಾಗಿದೆ
  • ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ
  • ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ
  • ಆರು ವರ್ಷದ ಹಿಂದೆ ಕೃಷ್ಣ ಕಡೆಗೆ ನಮ್ಮ ನಡಿಗೆ ಕಾರ್ಯಕ್ರಮ ನಡೆಸಿದರು
  • ಆದರೆ, ಯಾವುದೇ ಯೋಜನೆಗಳು, ಕೊಟ್ಟ ಭರವಸೆಗಳು ಈಡೇರಿಲ್ಲ
  • ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ  ಬಿಎಸ್​​ವೈ ವಾಗ್ದಾಳಿ
  • ಮೈತ್ರಿಯಿಂದ ಬಿಜೆಪಿಗೇ ಲಾಭ ಆಗುತ್ತದೆ
  • 23ನೇ ತಾರಿಖು ಚುನಾವಣೆ ಮುಗಿದ ಮೇಲೆ ಒಂದು ಸೀಲ್ಡ್​ ಕವರ್​ ಕೊಡ್ತೇನಿ
  • ಫಲಿತಾಂಶ ಬಂದ ಮೇಲೆ ಅದನ್ನು ಆ ಕವರ್​ ನೋಡಿ, ಆಮೇಲೆ ಉತ್ತರ ಹೇಳಿ
  • ಸುಮಲತಾ ಮಂಡ್ಯದಲ್ಲಿ ಸ್ಪರ್ಧಿಸಿದ್ದಾರೆ, ಅವರಿಗೆ ಬೇಷರತ್​ ಬೆಂಬಲ ಸೂಚಿಸಿದ್ದೇವೆ
  • ಮಂಡ್ಯಕ್ಕೆ ಅಂಬರೀಶ್​ ಪಾರ್ಥಿವ ಶರೀರದ ತೆಗೆದುಕೊಂಡು ಹೋಗಿದ್ದ ಯಾರು?
  • ಕುಮಾರಸ್ವಾಮಿ ಕೆಣಕಿದ ಮಾಜಿ ಸಿಎಂ ಯಡಿಯೂರಪ್ಪ
  • ಸುಮಲತಾಗೆ ಬೆಂಬಲ ಹೈಕಮಾಂಡ್​ ತೆಗೆದುಕೊಂಡ ನಿರ್ಧಾರ
  • ಕಾಂಗ್ರೆಸ್​ ಮುಕ್ತ ಭಾರತ ಎಂದು ಹೇಳಿದ್ದು ಮಹಾತ್ಮಗಾಂಧಿ
  • ಮೋದಿ, ಯಡಿಯೂರಪ್ಪ ಹೇಳಿದ ಮಾತಲ್ಲ
  • ಕಾಂಗ್ರೆಸ್​ ಇಷ್ಟೊಂದು ಕಡಿಮೆ ಸ್ಥಾನಗಳಿಸಲು ಕಾರಣ ಯಾರು?
  • ಮಾಧ್ಯಮಗೋಷ್ಠಿಯಲ್ಲಿ  ಬಿಎಸ್​​ವೈ ಪ್ರಶ್ನೆ
  • ನಾವ್ಯಾರು ಪ್ರಶ್ನಾತೀತರಲ್ಲ, ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದ್ದೇವೆ
  • ಲಾಲ್​ಕೃಷ್ಣ ಅಡ್ವಾಣಿ ನಮ್ಮ ಅಗ್ರಗಣ್ಯ ನಾಯಕರು
  • ಅವರು ಬ್ಲಾಗ್​ನಲ್ಲಿ ಬರೆದುಕೊಂಡ ತಕ್ಷಣ ಮೋದಿ ರಿಯಾಕ್ಷನ್​ ಕೊಟ್ಟಿದ್ದಾರೆ
  • ಅಡ್ವಾಣಿ ಅವರ ಸಲಹೆಯನ್ನು ಮೋದಿ ಒಪ್ಪಿಕೊಂಡಿದ್ದಾರೆ
  • ಅಡ್ವಾಣಿ ಅವರ ಮಾರ್ಗದರ್ಶನದಂತೆಯೇ ನಡೆಯುತ್ತೇವೆ: ಬಿಎಸ್​​ವೈ
  • ನಾನು ಒಬ್ಬ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ
  • ನಾನು 40 ವರ್ಷ ಸ್ಥಾನಮಾನ ಇಲ್ಲದೇ ಹೋರಾಡಿದ್ದೇನೆ
  • ಜವಾಬ್ದಾರಿ ಇಲ್ಲ ಎಂಬ ಚಿಂತೆ ಇಲ್ಲ, ನನ್ನ ಹೋರಾಟ ನಿರಂತರ ಎಂದ ಬಿಎಸ್​ವೈ
  • ನಾವು 22 ಸ್ಥಾನ ಗೆಲ್ಲುತ್ತೇವೆ,  ಜೆಡಿಎಸ್​- ಕಾಂಗ್ರೆಸ್​​ ಮೈತ್ರಿಯಲ್ಲಿ ಬಿರುಕು: ಶತಸಿದ್ಧ
  • ನಾನು ವಿರೋಧಪಕ್ಷದ ನಾಯಕನಿದ್ದೇನೆ, ಇನ್ಯಾವ ಸ್ಥಾನಮಾನ ಬೇಕು ?
  • ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಜಿ ಸಿಎಂ
  • ಸುಮಲತಾ ಅವರನ್ನ ಬಿಜೆಪಿ ಕಣಕ್ಕಿಳಿಸಿಲ್ಲ, ಅವರು ನಿಂತಿದ್ದಾರೆ ಅವರಿಗೆ ಬೆಂಬಲ ಕೊಟ್ಟಿದ್ದೇವೆ
  • ಸುಮಲತಾ ಪರ ಚುನಾವಣಾ ಪ್ರಚಾರಕ್ಕೆ ಹೋಗುವುದು ಕಷ್ಟ, ಸಾಧ್ಯವಾದರೆ ಹೋಗ್ತೇನಿ
  • ಕಲಬುರಗಿ, ತುಮಕೂರಿನಲ್ಲಿ  ನಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ
  • 100ಕ್ಕೆ 100ರಷ್ಟು ನಾವು ಖರ್ಗೆ, ದೇವೇಗೌಡರನ್ನು ಸೋಲಿಸುತ್ತೇವೆ: ಬಿಎಸ್​​ವೈ
  • ಹೆಲಿಕಾಪ್ಟರ್​​ ಸಿಗೋದು, ಸಿಗದೇ ಇರೋದಕ್ಕೆ ನಾನು ಮೋದಿ ಕಾರಣವೇ?
  • ಕುಮಾರಸ್ವಾಮಿಗೆ ಬಿಎಸ್​​ವೈ ಟಾಂಗ್​..
  • ಮುಂದಿನ ದಿನಗಳಲ್ಲಿ ಮುಸ್ಲಿಮರಿಗೆ ಸ್ಥಾನ ಕೊಡಲಾಗುವುದು
  • ಈಶ್ವರಪ್ಪ ಕಮೆಂಟ್​ ವಿಚಾರ, ಪರಿಶೀಲನೆ ನಡೆಸಿ ಕ್ರಮದ ಬಗ್ಗೆ ವಿಚಾರ ಮಾಡಲಾಗುವುದು
  • ಮಂಡ್ಯಕ್ಕೆ ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ
  • ನಿರುದ್ಯೋಗಕ್ಕೆ ಮೋದಿ ಅವರು ಮಾಡಿದ ಕಾರ್ಯಕ್ರಮಗಳ ಲಿಸ್ಟ್​ ಕೊಟ್ಟಿದ್ದೇವೆ
  • ಹಲವು ಕಾಮಗಾರಿಗಳನ್ನ ಕೇಂದ್ರ ಸರ್ಕಾರ ಕೈಗೊಂಡಿದೆ, ಹಲವರಿಗೆ ಉದ್ಯೋಗ ಸಿಕ್ಕಿದೆ
  • ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಶಾಸಕರ ನಿಲುವು ಗೊತ್ತಾಗಲಿದೆ
  • ನಾವು 22 ಸ್ಥಾನ ಗೆದ್ದರೆ, ಶಾಸಕರ ಮನಸಿನಲ್ಲಿ ಏನಿದೆ ಅನ್ನೋದು ಗೊತ್ತಾಗುತ್ತದೆ
  • ಮೋದಿ ಸರ್ಕಾರದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ನಾವು ಕೈಪಿಡಿ ಹಂಚುತ್ತೇವೆ
  • ಐಟಿ ದಾಳಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ: ಬಿಎಸ್​​ವೈ
  • 26 ಕ್ಷೇತ್ರಗಳಲ್ಲಿ ನಾನು ಕೊಟ್ಟ ಲಿಸ್ಟ್​ ಅನ್ನೇ ಮಾನ್ಯ ಮಾಡಲಾಗಿದೆ
  • ಬೆಂಗಳೂರು ದಕ್ಷಿಣ, ಚಿಕ್ಕೋಡಿಯಲ್ಲಿ ಮಾತ್ರ ಹೈಕಮಾಂಡ್​ ಬೇರೆ ತೀರ್ಮಾನ ಕೈಗೊಂಡಿದೆ
  • ಅಟಲ್​ ನಂತರ ಯಾರು ಎಂಬುದು ಯಾರಿಗಾದರೂ ಗೊತ್ತಿತ್ತಾ?
  • ಮುಂದೆ ಇನ್ನೊಬ್ಬ ನಾಯಕ ಪಕ್ಷದ ನಾಯಕತ್ವ ವಹಿಸಿಕೊಳ್ಳುತ್ತಾರೆ
  • ಈಗ ಮೋದಿ ಪ್ರಧಾನಿ ಆಗಿಲ್ಲವೆ, ಮುಂದೆ ಮತ್ತೊಬ್ಬರು ಬಂದೇ ಬರುತ್ತಾರೆ
  • ಶಿವಮೊಗ್ಗದಲ್ಲಿ ರಾಘವೇಂದ್ರ 1 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುತ್ತಾರೆ.
Last Updated : Apr 5, 2019, 12:43 PM IST

ABOUT THE AUTHOR

...view details