ಕರ್ನಾಟಕ

karnataka

ETV Bharat / state

ಕೇಂದ್ರದಿಂದ ನಂದಿನಿಯನ್ನು ಮಾಯ ಮಾಡುವ ಕಾರ್ಯಕ್ರಮ: ಬ್ರಿಜೇಶ್ ಕಾಳಪ್ಪ

ಅಮುಲ್​ ಬಗ್ಗೆ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

Etv Bharatbrijesh-kalappa-reaction-on-amul-dispute
ನಂದಿನಿಯನ್ನು ಮಾಯ ಮಾಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ: ಬ್ರಿಜೇಶ್ ಕಾಳಪ್ಪ

By

Published : Apr 10, 2023, 10:41 PM IST

ಬೆಂಗಳೂರು:ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ನಂದಿನಿ ಹಾಗೂ ಅಮುಲ್ ನಡುವಿನ ಸಂಘರ್ಷ ತಡೆಯುವ ಸಲುವಾಗಿ ಹೊಸ ಉಪಾಯವನ್ನು ಜನರ ಮುಂದಿಟ್ಟಿದ್ದಾರೆ.

ನಂದಿನಿ ಮತ್ತು ಅಮುಲ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಅಮಿತ್ ಶಾ ಈ ಹಿಂದೆ ಮಾತನಾಡಿದ್ದರು. ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿ ಉಂಟಾಗಿದೆ. ಇಂತಹ ದೊಡ್ಡ ನಿರ್ಧಾರಗಳನ್ನು ಮಾಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈಗ ಲಕ್ಷಾಂತರ ಜನರು ಹಾಲನ್ನು ಕೆಎಂಎಫ್​ಗೆ ಕೊಡುತ್ತಿದ್ದಾರೆ. ಅದೇ ರೀತಿ ಖರೀದಿ ಕೂಡ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಈ ವಿಚಾರ ಬರಬಾರದಾಗಿತ್ತು. ಈ ನಿರ್ಣಯದಿಂದ ಜನರಿಗೆ ಆಕ್ರೋಶ ಉಂಟಾಗಿದೆ. ವಿಜಯ ಬ್ಯಾಂಕ್ ಬ್ಯಾಂಕ್, ಬ್ಯಾಂಕ್​ ಆಫ್ ಬರೋಡಾ ಜೊತೆ ವಿಲೀನ ಆಗಿದೆ, ಸ್ಟೇಟ್ ಬ್ಯಾಂಕ್ ಮೈಸೂರ್ ಕೂಡ ಈಗ ಇಲ್ಲ. ಅದೂ ವಿಲೀನ ಆಗಿ ಹೋಗಿದೆ ಎಂದರು.

ಅದೇ ರೀತಿ ನಂದಿನಿಯನ್ನು ಮಾಯ ಮಾಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ನಾಳೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಬರಬಾರದು ಅಂದರೆ ಈ ಸಲಹೆಯನ್ನು ಸರ್ಕಾರ ಪಾಲಿಸಲೇ ಬೇಕು. ಈಗ ಈ ಚುನಾವಣೆ ಮುಗಿದ ಮೇಲೆ ಹೊಸ ಸರ್ಕಾರ ಬರುತ್ತದೆ. ಆಗ ಆ ಸರ್ಕಾರವೇ ಈ ಸಮಸ್ಯೆಯನ್ನು ಬಗೆಹರಿಸಲಿ. ಕೇಂದ್ರದ ಅಮೂಲ್​ನ ನಿರ್ಧಾರ ಸದ್ಯಕ್ಕೆ ಪಕ್ಕಕ್ಕೆ ಇಡಿ. ಹೊಸ ಸರ್ಕಾರ ಬಂದ ನಂತರ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ನಮ್ಮ ಮಾತನ್ನು ಮೀರಿ ಮುಂದಿನ ದಿನದಲ್ಲಿ ನಿರ್ಧಾರ ತೆಗೆದುಕೊಂಡರೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರಿ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ರಾಮನಗರ ಜಿಲ್ಲೆಯವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ: ಡಿ.ಕೆ.ಸುರೇಶ್

ABOUT THE AUTHOR

...view details