ಬೆಂಗಳೂರು:ರಾಜ್ಯಾದ್ಯಂತ ಲಾಕ್ಡೌನ್ನಿಂದ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಬಿಗ್ಬ್ಯಾಕೇಟ್, ಅಮೇಜಾನ್ ಸಂಸ್ಥೆಗಳು ಜನರಿಗೆ ಬೇಕಾದ ಸೇವೆಗಳನ್ನು ನೀಡುತ್ತಿವೆ. ಆದರೆ ಈ ಸಂಸ್ಥೆಗಳಿಗೆ ಡೆಲಿವರಿ ಬಾಯ್ ಗಾಗೂ ವಾಹನಗಳ ಕೊರತೆ ಕಾಡುತ್ತಿದೆ.
ಬೌನ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿವೇಕ್ ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಅವರ ಊರುಗಳಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಅವರು ಹಿಂತಿರುಗಿ ಬರುವುದು ಅಸಾಧ್ಯ. ಹೀಗಾಗಿ ದ್ವಿಚಕ್ರ ವಾಹನ ಬಾಡಿಗೆ ನೀಡುವ ಸಂಸ್ಥೆಯಾದ ಬೌನ್ಸ್, ಮನೆಯಲ್ಲಿ ಇರುವ ದ್ವಿಚಕ್ರವಾಹನವನ್ನು ಕೆಲ ದಿನಗಳ ಕಾಲ ಅಗತ್ಯ ಸೇವೆಗೆ ಉಚಿತವಾಗಿ ಅಥವಾ ಗೌರವಧನಕ್ಕಾಗಿ ನೀಡಬಹುದು ಎಂಬ ಸಾಮಾಜಿಕ ಕಳಕಳಿಯನ್ನು ಪ್ರಾರಂಭಿಸಿದೆ.
ಈ ಸಾಮಾಜಿಕ ಕಳಕಳಿಗೆ ಕೈ ಜೋಡಿಸುವವರು Scooterhero.bounceshare.com ವೆಬ್ ವಿಳಾಸಕ್ಕೆ ನಿಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು. ದಿನಕ್ಕೆ 100 ರೂ ಗರಿಷ್ಠ ಹಣವನ್ನು ಬೌನ್ಸ್ ಸಂಸ್ಥೆ ನೀಡಲಿದೆಯಂತೆ.
ಸಾಕಷ್ಟು ಜನರ ಮನೆಯಲ್ಲಿ ವಾಹನಗಳಿರುತ್ತವೆ. ಈ ವಾಹನಗಳನ್ನು ಬೌನ್ಸ್ ಸಂಸ್ಥೆಗೆ ಸೇವಾ ಮನೋಭಾವದಿಂದ ಅಥವಾ ಗೌರವಧನಕ್ಕೆ ನೀಡಿದರೆ ಅನುಕೂಲವಾಗಲಿದೆ. ಉದ್ಯೋಗಾಕಾಂಕ್ಷಿಗಳು ಗ್ರೋಫರ್ಸ್ ಅಥವಾ ಅಮೇಜಾನ್ ರೀತಿಯ ಸಂಸ್ಥೆಗಳಲ್ಲಿ ನೌಕರರಾಗಿ ಹೋಗಬೇಕು ಎಂದರೆ ಅವರ ಬಳಿ ದ್ವಿಚಕ್ರವಾಹನ ಇರಲೇಬೇಕು. ಈ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಸಾಕಷ್ಟು ಜನರಿದ್ದಾರೆ. ನೀವು ವಾಹನಗಳನ್ನು ನೀಡಿದರೆ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ಬೌನ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿವೇಕ್ ಈಟಿವಿ ಭಾರತಗೆ ವಿವರಿಸಿದರು.