ನೆಲಮಂಗಲ : ಪುಸ್ತಕದ ಅಂಗಡಿಯಲ್ಲಿ ರಿಯಾಯತಿ ದರದ ವಿಚಾರಕ್ಕೆ ಸಂಬಂಧಪಟ್ಟಂತೆ ಅಂಗಡಿ ಮಾಲೀಕ ಮತ್ತು ಯುವಕರ ಗುಂಪಿನ ನಡುವೆ ಜಗಳ ನಡೆದು ಪರಸ್ಪರ ಕೈ ಮಿಲಾಯಿಸಿದ್ದಾರೆ.
ಡಿಸ್ಕೌಂಟ್ ವಿಚಾರಕ್ಕೆ ಗಲಾಟೆ: ಅಂಗಡಿ ಮಾಲೀಕ ಮತ್ತು ಗ್ರಾಹಕರ ನಡುವೆ ಮಾರಾಮಾರಿ - ಬೆಂಗಳೂರು ಸುದ್ದಿ
ಬುಕ್ ಸ್ಟೋರ್ ಅಂಗಡಿಗೆ ವ್ಯಾಪಾರಕ್ಕೆಂದು ಬಂದ ಅಂತರರಾಜ್ಯದ ಯುವಕರು ಡಿಸ್ಕೌಂಟ್ ವಿಚಾರವಾಗಿ ಅಂಗಡಿ ಮಾಲೀಕನೊಂದಿಗೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಮಾಲೀಕ ಹಾಗೂ ಯುವಕರ ಗುಂಪಿನ ನಡುವೆ ಘರ್ಷಣೆ ನಡೆದಿದೆ.
ಅಂಗಡಿ ಮಾಲೀಕ ಮತ್ತು ಗ್ರಾಹಕರ ನಡುವೆ ಜಗಳ
ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಸ್ಟೋರ್‌ಗೆ ವ್ಯಾಪಾರಕ್ಕೆಂದು ಬಂದ ಹೊರ ರಾಜ್ಯದ ಯುವಕರು ಡಿಸ್ಕೌಂಟ್ ವಿಚಾರವಾಗಿ ಅಂಗಡಿ ಮಾಲೀಕನೊಂದಿಗೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಮಾಲೀಕ ಹಾಗೂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಲ್ಲೆಗೂ ಮುಂದಾಗಿದ್ದಾರೆ. ಗಲಾಟೆ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.