ಕರ್ನಾಟಕ

karnataka

ETV Bharat / state

ಅಲ್ಪಸಂಖ್ಯಾತರ ಮತ ಕೇಳುವ ನೈತಿಕತೆ ಜಮೀರ್​ಗಿಲ್ಲ: ಅನ್ವರ್ ಮಾಣಿಪ್ಪಾಡಿ - ಅನ್ವರ್ ಮಾಣಿಪ್ಪಾಡಿ

ಬಡ ಮುಸಲ್ಮಾನರಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಬೇಕಾಗಿದ್ದ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಅವರ ಮತ ಕೇಳುವ ಯಾವ ನೈತಿಕತೆಯನ್ನು ಕಾಂಗ್ರೆಸ್​ ನಾಯಕರು ಇಟ್ಟುಕೊಂಡಿಲ್ಲ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಮತ್ತು ಆಹಾರ ಸಚಿವ ಜಮೀರ್‌ ಅಹ್ಮದ್‌

By

Published : Mar 5, 2019, 5:25 PM IST

ಬೆಂಗಳೂರು: ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕೆಂದು ಆಹಾರ ಸಚಿವ ಜಮೀರ್‌ ಅಹ್ಮದ್‌​​ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಅಲ್ಪಸಂಖ್ಯಾತರ ಮತ ಕೇಳುವ ಯಾವ ನೈತಿಕತೆಯೂ ಅವರಿಗಿಲ್ಲ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಟಾಂಗ್ ನೀಡಿದ್ದಾರೆ.

ಅವರ ಪಕ್ಷದ ನಾಯಕರೇ ಸೇರಿ ಅಲ್ಪಸಂಖ್ಯಾತರ ವಕ್ಫ್ ಆಸ್ತಿಯನ್ನು ಲೂಟಿ ಮಾಡುವ ಮೂಲಕ ವೈಯಕ್ತಿಕವಾಗಿ ಅವರೆಲ್ಲರೂ ಇಂದು ಕೋಟ್ಯಾಧಿಪತಿಗಳಾಗಿದ್ದಾರೆ. ಮೂರು ಮೆಡಿಕಲ್ ಕಾಲೇಜು, 12 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 100ಕ್ಕೂ ಹೆಚ್ಚು ವೃತ್ತಿ ಶಿಕ್ಷಣ ಕಾಲೇಜುಗಳಿವೆ. ಇವೆಲ್ಲವೂ ಅಲ್ಪಸಂಖ್ಯಾತರ ವಕ್ಫ್ ಅಧೀನಕ್ಕೆ ಬರುತ್ತವೆ. ಬಡ ಮುಸಲ್ಮಾನರಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಬೇಕಾಗಿದ್ದ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿರುವುದು ಜಮೀರ್​ಗೆ ಗೊತ್ತಿಲ್ಲವೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಪಂಚತಾರಾ ಹೋಟೆಲ್‍ಗಳು, ವಾಣಿಜ್ಯ ಸಂಕೀರ್ಣಗಳು ಇವೆಲ್ಲವೂ ವಕ್ಫ್​ಗೆ ಸೇರಿದ ಜಾಗಗಳಲ್ಲಿದ್ದು ಇವುಗಳ ಮೌಲ್ಯವೇ 2.30 ಲಕ್ಷ ಕೋಟಿ ರೂ.ಗಳಾಗಿದೆ. ಈ ಬಗ್ಗೆ ವರದಿಯೊಂದರಲ್ಲಿ ನಮೂದಿಸಲಾಗಿದೆ. ವಿಧಾನ ಪರಿಷತ್‍ನಲ್ಲಿ ಈ ವರದಿ ಮಂಡನೆಗೆ ಆದೇಶವಾಗಿತ್ತು. ಹೈಕೋರ್ಟ್ ಕೂಡಾ 2 ಬಾರಿ ಈ ಸಂಬಂಧ ಆದೇಶಿಸಿದೆ. ಆದರೆ, ಈ ವರದಿ ಮಂಡನೆಯನ್ನು ಮಾಡದೇ ಸುಪ್ರೀಂ ಕೋರ್ಟ್‍ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಅದು ಇನ್ನೂ ಅಂಗೀಕಾರವಾಗಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವಕ್ಫ್ ಆಸ್ತಿ ವಿಷಯದಲ್ಲಿ ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಿಧೇಯಕಗಳನ್ನು ಜಾರಿಗೊಳಿಸಿದ್ದು ಬಿಜೆಪಿ ಆಡಳಿತಾವಧಿಯಲ್ಲಿ ಎನ್ನುವುದು ಗಮನಾರ್ಹ.

1998ರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ವಕ್ಫ್ ಆಸ್ತಿ ಎಂದು ಒಮ್ಮೆ ಘೋಷಿತವಾಗಿದ್ದರೆ ಅದು ಎಂದೆಂದಿಗೂ ವಕ್ಫ್ ಆಸ್ತಿಯಾಗಿಯೇ ಉಳಿಯಬೇಕು. ಬೇರೆಯವರ ವಶವಾಗಿದ್ದರೂ, ವಾಪಸ್ ವಕ್ಫ್​ಗೆ ಸೇರಲೇಬೇಕು. ಅದರಂತೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ವಕ್ಫ್ ಆಸ್ತಿಯನ್ನು ವಾಪಸ್ ತರಲು ನ್ಯಾಯಲಯದಲ್ಲಿ ವ್ಯಾಜ್ಯ ಹೂಡದೇ, ಕಾರ್ಯಪಡೆ ಮೂಲಕ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯವ ಸಲುವಾಗಿ ಕಾನೂನು ರೂಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜಮೀರ್ ಅಹಮ್ಮದ್​​, ಅಲ್ಪಸಂಖ್ಯಾತರ ಮತ ಕೇಳುವ ಯಾವ ನೈತಿಕತೆಯನ್ನು ಇಟ್ಟುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಅವರದೇ (ಕಾಂಗ್ರೆಸ್-ಜೆಡಿಎಸ್) ಸಮ್ಮಿಶ್ರ ಸರ್ಕಾರವಿರುವುದರಿಂದ, ವಕ್ಫ್ ಆಸ್ತಿಯನ್ನು ಹಿಂದಕ್ಕೆ ಪಡೆದು ಅಲ್ಪಸಂಖ್ಯಾತರ ಮತ ಕೇಳಲಿ. ಅದಿಲ್ಲದೇ ಕಾಂಗ್ರೆಸ್ ವಂಚನೆಯನ್ನು ಅಲ್ಪಸಂಖ್ಯಾತರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಜಮೀರ್ ಹೇಳಿಕೆಗೆ ತಿರುಗೇಟು ನೀಡಿದರು.

ABOUT THE AUTHOR

...view details