ಕರ್ನಾಟಕ

karnataka

ETV Bharat / state

ಸಿಎಂ ಕಾಣೆಯಾಗಿದ್ದಾರೆಂಬ ಕಾಂಗ್ರೆಸ್​ ಟ್ವೀಟ್​ಗೆ ಬಿಜೆಪಿ ಭರ್ಜರಿ ಟಾಂಗ್​

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿದ್ದು, ರಾಜ್ಯದ ನೆರೆ ಹಾವಳಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಈ ಮೂಲಕ ಮುಖ್ಯಮಂತ್ರಿ ಕಾಣೆಯಾಗಿದ್ದಾರೆ ಎನ್ನುವ ಕಾಂಗ್ರೆಸ್ ಟ್ವೀಟ್​ಗೆ ಬಿಜೆಪಿ ತಿರುಗೇಟು ನೀಡಿದಂತಾಗಿದೆ.

ಬಿ.ಎಸ್ ಯಡಿಯೂರಪ್ಪ ,Yediyurappa

By

Published : Aug 8, 2019, 2:27 PM IST

ಬೆಂಗಳೂರು :ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿದ್ದು, ರಾಜ್ಯದ ನೆರೆ ಹಾವಳಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಮುಖ್ಯಮಂತ್ರಿ ಕಾಣೆಯಾಗಿದ್ದಾರೆ ಎನ್ನುವ ಕಾಂಗ್ರೆಸ್ ಟ್ವೀಟ್​ಗೆ ತಿರುಗೇಟು ನೀಡಿದೆ.

ಇಡೀ ಉತ್ತರ ಕರ್ನಾಟಕ ನೆರೆ ಹಾವಳಿಗೆ ಸಿಲುಕಿದ್ದು, ಮೂರು ದಿನಗಳಿಂದ‌ ಮುಖ್ಯಮಂತ್ರಿಗಳು ಕಾಣೆಯಾಗಿದ್ದರೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿತ್ತು. ಈ ಟ್ವೀಟ್​ಗೆ ಟಾಂಗ್ ನೀಡಿರುವ ಬಿಜೆಪಿ, ನೆರೆ ಸಂತ್ರಸ್ತರಿಗೆ ನೆರವು ನೀಡುವಲ್ಲಿ ನಾವು ತೊಡಗಿದ್ದೇವೆ. ಸುಳ್ಳು ಸುದ್ದಿ ಹಬ್ಬಿಸುವ, ನಕಲಿ ಸುದ್ದಿ‌ ಉತ್ಪಾದಿಸುವ ಜಂಕ್​ಗಳನ್ನು ಮುಂದೆ ಎದುರಿಸುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿದೆ.

ABOUT THE AUTHOR

...view details