ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ಗೆ ಬಿಜೆಪಿ ಟ್ವೀಟ್ ಮೂಲಕವೇ ಕಾಲೆಳೆದಿದೆ. ಈ ಮೂಲಕ ಮತ್ತೊಂದ ಸುತ್ತಿನ ಟ್ವೀಟ್ ವಾರ್ ಗೆ ವೇದಿಕೆ ಕಲ್ಪಿಸಿದಂತಾಗಿದೆ.
‘ಕೋತಿ ತಾನು ಕೆಡೋದಲ್ದೆ...’ ಸಿದ್ದು ಕಾಲೆಳೆದ ಬಿಜೆಪಿ
ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ಗೆ ಬಿಜೆಪಿ ಮರು ಟ್ವೀಟ್ ಮಾಡಿ ಕಾಲೆಳೆದಿದೆ.
ಸಿದ್ದರಾಮಯ್ಯ
ಎಐಸಿಸಿ ನಾಯಕನನ್ನು ರಾಜ್ಯ ಯಾವಾಗಲೂ ಬೆಂಬಲಿಸಿದೆ ಮತ್ತು ಪ್ರೋತ್ಸಾಹಿಸಿದೆ. ಇದು ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಚಾರದಲ್ಲಿ ಸಾಬೀತಾಗಿದೆ. ಇದೀಗ ನಾವು ನಮ್ಮ ಮುಂದಿನ ಪ್ರಧಾನಿಯ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಬಿಜೆಪಿ ತನ್ನ ಸ್ವಂತ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗದ ವ್ಯಕ್ತಿ ಮತ್ತೊಂದು ಸೋಲಿಗೆ ಕಾರ್ಪೆಟ್ ಹಾಕುತ್ತಿದ್ದಾರೆ. ಗಾದೆ ಮಾತು ‘ಕೋತಿ ತಾನು ಕೆಡೋದಲ್ದೆ..’ ಎಂದು ಟ್ವಿಟ್ ಮಾಡಿ ಪರೋಕ್ಷವಾಗಿ ಸಿದ್ದರಾಮಯ್ಯನವರ ಕಾಲೆಳೆದಿದೆ.