ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಜನ್ಮದಿನ: ಸಿಎಂ‌ ಸೇರಿ ಬಿಜೆಪಿ ನಾಯಕರ ಟ್ವೀಟ್ - ಡಿ.ವಿ ಸದಾನಂದಗೌಡ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆ, ಟ್ವಿಟರ್​​​​​​ನಲ್ಲಿ ಬಿಜೆಪಿಯ ರಾಜಕೀಯ ಮುಖಂಡರು ಮೋದಿಗೆ ಶುಭಕೊರಿದ್ದಾರೆ.

ಪ್ರಧಾನಿ ಮೋದಿ

By

Published : Sep 17, 2019, 10:40 AM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಚಿವರು ರಾಜ್ಯ ಬಿಜೆಪಿ ನಾಯಕರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶದ ಆತ್ಮಗೌರವ ಮತ್ತು ಅಭಿವೃದ್ಧಿ ಪಥವನ್ನು ತೋರಿಸಿದ ದೂರದೃಷ್ಟಿಯ ನಾಯಕರು ನೀವು.‌ ಮುಂಬರುವ ಬಹಳಷ್ಟು ಕಾಲ ದೇಶಕ್ಕೆ ಸೇವೆ ಸಲ್ಲಿಸಲು ದೇವರು ನಿಮಗೆ ಉತ್ತಮ ಆಯುರ್​ ಆರೋಗ್ಯ ಮತ್ತು ಸಂತಸದಾಯಕ ಜೀವನವನ್ನು ನೀಡಿ ಹರಸಲಿ‌ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮಾಡಿದ್ದಾರೆ.

ನಮ್ಮ ಪ್ರೀತಿಯ ಪ್ರಧಾನ ಮಂತ್ರಿಗಳಿಗೆ ಜನ್ಮದಿನದ ಶುಭಾಶಯಗಳು. ಆರೋಗ್ಯವಂತರಾಗಿ ದೀರ್ಘ ಕಾಲ ಬಾಳಿರಿ ಎಂದು ಆಶಿಸುತ್ತೇವೆ, ರಾಷ್ಟ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ, ಹಲವರಿಗೆ ನೀವೇ ಸ್ಪೂರ್ತಿ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

ದೇಶ ಕಂಡ ಅಪ್ರತಿಮ ನಾಯಕ, ಅಭಿವೃದ್ಧಿಯ ಹರಿಕಾರ, ಭಾರತವನ್ನು ವಿಶ್ವಗುರು ಮಾಡುವ ದಿಶೆಯಲ್ಲಿ ಸಾಗುತ್ತಿರುವ ದೂರದೃಷ್ಟಿಯುಳ್ಳ ನಾಯಕ, ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕಂದಾಯ ಸಚಿವ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details