ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​ಗೆ ಮರೆವಿನ ಕಾಯಿಲೆ ಇದೆ, ತೈಲ ತೆರಿಗೆ ಇಳಿಸಿದ್ದನ್ನು ಮರೆತುಬಿಟ್ಟಿದೆ : ಬಿಜೆಪಿ ಟ್ವಿಟೇಟು - ಕಾಂಗ್ರೆಸ್​​​ಗೆ ಮರೆವಿನ ಖಾಯಿಲೆ ಇದೆ ಬಿಜೆಪಿ ಟ್ವೀಟ್​

ರಾಜ್ಯ ಸರ್ಕಾರ ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವುದಕ್ಕೆ ಹಿಂದೂ ವಿರೋಧಿ ಕಾಂಗ್ರೆಸ್ ಅಧಿಕೃತವಾಗಿ ವಿರೋಧಿಸಿದೆ. ಇದರ್ಥ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಬೆಂಬಲಿಸಿದಂತಲ್ಲವೇ? ಅಸಂಖ್ಯಾತ ಹಿಂದೂಗಳ ಬದುಕು ಕಸಿದುಕೊಂಡ ಕಾಂಗ್ರೆಸ್‌ ಪಕ್ಷಕ್ಕೆ ಬದುಕಿನ ಪಾಠ ಮಾಡಲು ನೈತಿಕತೆ ಇದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ..

ಬಿಜೆಪಿ
ಬಿಜೆಪಿ

By

Published : Mar 29, 2022, 7:00 PM IST

ಬೆಂಗಳೂರು :ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ, ಇಂಧನ ತೈಲ ತೆರಿಗೆ ಯಾವಾಗ ಕಡಿತಗೊಳಿಸುತ್ತೀರಾ ಎನ್ನುವ ಕಾಂಗ್ರೆಸ್ ಟ್ವೀಟ್‌ಗೆ ಬಿಜೆಪಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ. ಇತ್ತೀಚೆಗೆ ತೈಲದ ಮೇಲಿನ ತೆರಿಗೆ ಇಳಿಸಿದ್ದು ನೆನಪಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ನಾಯಕರಿಗೆ ಮರೆವಿನ ಕಾಯಿಲೆ ಇದೆಯೋ ಅಥವಾ ಜನರನ್ನು ತಪ್ಪು ದಾರಿಗೆ ಎಳೆಯುವ ಜಾಣ ಮರೆವೋ? ನಮ್ಮ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ಬೆಲೆಯನ್ನು ಇಳಿಸಿದ್ದು, ಇಷ್ಟು ಬೇಗ ಮರೆತು ಹೋಯಿತೇ? ಸುಳ್ಳೇ ಕಾಂಗ್ರೆಸ್‌ ಪಕ್ಷದ ಮನೆ ದೇವರು ಎನ್ನುವುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕೆ!? ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್‌ಗೆ ಟಾಂಗ್ ನೀಡಿದೆ.

ರಾಜ್ಯ ಸರ್ಕಾರ ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವುದಕ್ಕೆ ಹಿಂದೂ ವಿರೋಧಿ ಕಾಂಗ್ರೆಸ್ ಅಧಿಕೃತವಾಗಿ ವಿರೋಧಿಸಿದೆ. ಇದರ್ಥ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಬೆಂಬಲಿಸಿದಂತಲ್ಲವೇ? ಅಸಂಖ್ಯಾತ ಹಿಂದೂಗಳ ಬದುಕು ಕಸಿದುಕೊಂಡ ಕಾಂಗ್ರೆಸ್‌ ಪಕ್ಷಕ್ಕೆ ಬದುಕಿನ ಪಾಠ ಮಾಡಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದೆ.

ಸಿದ್ದುಗೆ ಗೇಟ್ ಪಾಸ್ :ಸಿದ್ದರಾಮಯ್ಯ ಅವರನ್ನು ಸಂಘಟನಾತ್ಮಕವಾಗಿ ಪಕ್ಷದಿಂದ ದೂರವಿಡುವ ಪ್ರಯತ್ನ ಆರಂಭವಾಗಿದೆ. ಮಹಾದೇವಪುರ ಕ್ಷೇತ್ರದ ಡಿಜಿಟಲ್ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆಯ ಪೋಸ್ಟರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಅವಕಾಶವಿಲ್ಲ. ಸಿದ್ದರಾಮಯ್ಯ ಅವರಿಗೆ ಪಕ್ಷದ ಎಲ್ಲಾ ವ್ಯವಹಾರಗಳಿಂದ ಗೇಟ್ ಪಾಸ್ ನೀಡಲಾಗುತ್ತಿದೆಯೇ? ಎಂದು ಕಾಂಗ್ರೆಸ್‌ ಕಲಹ ಹ್ಯಾಷ್ ಟ್ಯಾಗ್‌ನೊಂದಿಗೆ ಬಿಜೆಪಿ ಟೀಕಿಸಿದೆ.

ABOUT THE AUTHOR

...view details