ಬೆಂಗಳೂರು: ಬಿಜೆಪಿ ಕೋವಿಡ್ನಿಂದ ನಿಧನರಾದ 4,531 ಮಂದಿಯ ಶವಸಂಸ್ಕಾರ ಮಾಡುವ ಮೂಲಕ ನಿಸ್ವಾರ್ಥ ಸೇವೆ ಮಾಡಿದೆ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಗಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ರು. ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನಡೆದಿದೆ ಎಂದ್ರು. ರಾಜ್ಯದ ಪದಾಧಿಕಾರಿಗಳು ಇಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಪದಾಧಿಕಾರಿಗಳು ಜಿಲ್ಲೆಯಲ್ಲೇ ವರ್ಚುಯಲ್ ಮೂಲಕ ಭಾಗಿಯಾಗಿದ್ರು. ಕೋವಿಡ್ ನಿರ್ವಹಣೆಯ ಬಗ್ಗೆ ಚರ್ಚೆಯಾಗಿದೆ ಎಂದರು.
ಮೂರನೇ ಅಲೆ ಬಂದಲ್ಲಿ ಏನು ಮಾಡಬೇಕು ಅಂತ ಮುನ್ಸೂಚನೆ ನೀಡಲಾಗಿದೆ. ಅರುಣ್ ಸಿಂಗ್ ಅವರು ಕರ್ನಾಟಕವನ್ನ ಹೊಗಳಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ದೇಶಕ್ಕೆ ಮಾದರಿ ಅಂತ ಹೇಳಿದ್ದಾರೆ ಎಂದರು. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಯಶಸ್ವಿಯಾಗಿದೆ. ಆದರೆ, ಆರಂಭದಲ್ಲಿ ಕಾಂಗ್ರೆಸ್ ವಿರೋಧಿ ಚಟುವಟಿಕೆ ಮಾಡಿತು. ನಮ್ಮಲ್ಲಿ ಮಾಸ್ಕ್, ಸ್ಯಾನಿಟೈಸರ್ ಇಲ್ಲದಿರೋ ಕಾಲವಿತ್ತು. ಟೀಕೆ ಟಿಪ್ಪಣಿಗಳ ಬಗ್ಗೆ ಅಧ್ಯಕ್ಷರು ಉಲ್ಲೇಖ ಮಾಡಿದರು.