ಬೆಂಗಳೂರು:ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಸಂಭ್ರಮ: ಗಣ್ಯರಿಂದ ಶುಭ ಹಾರೈಕೆ - ಸಿದ್ದರಾಮಯ್ಯಗೆ ಶುಭ ಕೋರಿದ ಈಶ್ವರ್ ಖಂಡ್ರೆ
ಯುವಕರೇ ನಾಚುವಂತಿರುವ ಸಿದ್ದರಾಮಯ್ಯ ಅವರ ಕ್ರೀಯಾಶೀಲತೆ ನಮಗೆಲ್ಲರಿಗೂ ಸ್ಪೂರ್ತಿ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ಸಲ್ಲಿಕೆ ಮಾಡಿರುವ ಖಂಡ್ರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯರು, ವಿಪಕ್ಷ ನಾಯಕರು ಹಾಗೂ ನಮ್ಮಲ್ಲೆರ ನೆಚ್ಚಿನ ನಾಯಕರಾದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮ ಜ್ಞಾನ, ಅನುಭವ, ವ್ಯಕ್ತಿತ್ವ ಹಾಗೂ ಹೋರಾಟದ ಮೂಲಕ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜನ ನಾಯಕ. ಪ್ರತಿ ನಡೆಯೂ ಅನುಕರಣಿಯ. ಯುವಕರೇ ನಾಚುವಂತಿರುವ ಅವರ ಕ್ರೀಯಾಶೀಲತೆ ನಮಗೆಲ್ಲರಿಗೂ ಸ್ಪೂರ್ತಿ. ರಾಜ್ಯಕ್ಕೆ ಅವರ ಸೇವೆ ಹಾಗೂ ಮಾರ್ಗದರ್ಶನ ಇನ್ನಷ್ಟು ಅಗತ್ಯವಿದ್ದು ಭಗವಂತ ಅವರಿಗೆ ಆಯುರ್ ಆರೋಗ್ಯ ಅಭಿವೃದ್ಧಿ ನೀಡಲಿ ಎಂದು ಹಾರೈಸಿದ್ದಾರೆ.
ಸದ್ಯ ಕೋವಿಡ್-19 ಸೋಂಕಿನಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಗುಣಮುಖರಾಗಿದ್ದು, ನಾಳೆ ಬಿಡುಗಡೆಯಾಗಲಿದ್ದಾರೆ. ಆಸ್ಪತ್ರೆಯಲ್ಲಿರುವ ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.