ಬೆಂಗಳೂರು:ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಮೂಕಾಂಬಿಕ ನಗರದಲ್ಲಿ ನಿನ್ನೆ ಸುಮಾರು ರಾತ್ರಿ 10.30ಕ್ಕೆ ರೌಡಿ ಗೊಣ್ಣೆ ವಿಜಿ ತಂಡದವರು ಬೈಕ್ ವ್ಹೀಲೀಂಗ್ ಮಾಡುತ್ತಿದ್ದರು. ಇದರಿಂದ ರಸ್ತೆಯಲ್ಲಿ ಓಡಾಡುವವರಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಜಯಂತ್ ಎಂಬುವರು ರಸ್ತೆಯಲ್ಲಿ ವಯಸ್ಸಾದವರು ಓಡಾಡ್ತ ಇರ್ತಾರೆ. ಈ ರೀತಿ ವ್ಹೀಲಿಂಗ್ ಮಾಡದಂತೆ ಮನವಿ ಮಾಡಿದ ಕಾರಣ ಆಕ್ರೋಶಗೊಂಡ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡ್ಬೇಡಿ ಎಂದು ಮನವಿ ಮಾಡಿದ್ದಕ್ಕೆ ಹಲ್ಲೆ ಹಲ್ಲೆಯಿಂದ ಜಯಂತ್ (30) ಎಂಬುವರಿಗೆ ಗಾಯವಾಗಿ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡ್ರ್ಯಾಗರ್ನಿಂದ ಹಲ್ಲೆ ಮಾಡಿದ ಪರಿಣಾಮ ಜಯಂತ್ ಮೂಗಿಗೆ ಗಂಭೀರ ಗಾಯವಾಗಿತ್ತು. ವೈದ್ಯರು ಸರ್ಜರಿ ಮಾಡಬೇಕು ಎಂದು ತಿಳಿಸಿದ್ದಾರೆ.
ಸದ್ಯ ಜಯನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಜಯಂತ್ಗೆ ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಕಾರಣ ನಗರದಿಂದ ಮನೆ ಖಾಲಿ ಮಾಡಲು ಜಯಂತ್ ಕುಟುಂಬ ನಿರ್ಧಾರ ಮಾಡಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.