ಬೆಂಗಳೂರು: ನೀವು ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತೀರಾ?, ಒಂದು ವೇಳೆ ಟಿಕೆಟ್ ಪಡೆಯದೇ ಪ್ರಯಾಣಿಸಿದ್ರೆ ಇನ್ಮುಂದೆ ನಿಮಗೆ ದಂಡ ಬೀಳುವುದಂತೂ ಖಂಡಿತ. ಯಾಕಂದ್ರೆ, ಬಿಎಂಟಿಸಿ ಎನ್ಐಎನ್ಸಿ (Not Issued not collected) ವ್ಯವಸ್ಥೆಯನ್ನು ಪರಿಶೀಲಿಸಿ, ಪರ್ಯಾಯ ವ್ಯವಸ್ಥೆ ಜಾರಿ ಮಾಡಿದೆ.
ಮೋಟಾರು ವಾಹನ ಕಾಯ್ದೆ 1988 ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1989ರ ಅನ್ವಯ ಬಸ್ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಂದ ನಿಗದಿತ ಟಿಕೆಟ್ ದರ ಪಡೆದು, ಟಿಕೆಟ್ ನೀಡುವುದು ಕಂಡೆಕ್ಟರ್ ಕೆಲಸವಾಗಿತ್ತು. ಅದೇ ರೀತಿ ಬಸ್ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ನಿಗದಿತ ಪ್ರಯಾಣದರ ನಿರ್ವಾಹಕರಿಗೆ ಪಾವತಿಸಿ ಟಿಕೆಟ್ ಪಡೆಯುವುದು ಪ್ರಯಾಣಿಕರ ಕರ್ತವ್ಯವೂ ಆಗಿತ್ತು.