ಬೆಂಗಳೂರು :ಲಾಕ್ಡೌನ್ ಹಿನ್ನೆಲೆ ಈವರೆಗೆ ಜಪ್ತಿ ಮಾಡಿರುವ ವಾಹನಗಳನ್ನು ನಿಯಮಾನುಸಾರವಾಗಿ ವಾಪಸ್ ಮಾಡಲಾಗುದೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ತಿಳಿಸಿದ್ದಾರೆ.
ಲಾಕೌಡೌನ್ ಸಂದರ್ಭದಲ್ಲಿ ನಿಯಮ ಮೀರಿದ ವಾಹನ ಮಾಲೀಕರಿಗೆ ನಗರ ಪೊಲೀಸ್ ಆಯುಕ್ತರು ಸಿಹಿ ಸುದ್ದಿ ಕೊಟ್ಟ ಬೆನ್ನಲ್ಲೇ ಮಾತನಾಡಿದ ಅವರು, ಲಾಕ್ಡೌನ್ ಆರಂಭವಾದ ಒಂದೆರಡು ದಿನಗಳ ನಂತರದಿಂದ ವಾಹನಗಳನ್ನ ಜಪ್ತಿ ಮಾಡಲು ಆರಂಭವಾಗಿತ್ತು. ಈವರೆಗೂ ನಗರದಲ್ಲಿ ಸುಮಾರು 47 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿಯಾಗಿವೆ ಎಂದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ವಾಹನಗಳನ್ನ ವಾಪಸ್ ಮಾಡುವ ಬಗ್ಗೆ ಸರ್ಕಾರದ ಉನ್ನತ ಮಟ್ಟದದಲ್ಲಿ ನಿರ್ಧರಿಸಲಾಗಿದೆ. ಆರಂಭದ ದಿನದಿಂದ ಜಪ್ತಿಯಾದ ವಾಹನಗಳನ್ನ ವಾಪಸ್ ಮಾಡಲಾಗುವುದು. ಸದ್ಯ ಜಪ್ತಿ ಮಾಡಿದ ವಾಹನಗಳನ್ನು ವಾಪಸ್ ನೀಡಲು ಸಾಧ್ಯವಿಲ್ಲ. ಸದ್ಯ ಕೊರೊನಾ ಸೋಂಕು ಹಿನ್ನೆಲೆ ಕ್ಯಾಲೆಂಡರ್ ಆಧಾರದಲ್ಲಿ ಠಾಣಾವಾರು ವಾಪಸ್ ಮಾಡುತ್ತೇವೆ. ಇದೇ ವೇಳೆ ವಾಹನ ಮಾಲೀಕರು ಸಾಮಾಜಿಕ ಅಂತರ ಕಾಪಾಡುವ ಮೂಲಕ ಬಂದು ವಾಹನಗಳನ್ನ ವಾಪಸ್ ಪಡೆಯಬೇಕು. ಹಾಗೆಯೇ ಸದ್ಯ ಪ್ರತಿ ವಾಹನದ ಮೇಲೆ ಎನ್‌ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ) ಪ್ರಕರಣ ದಾಖಲಿಸಿದ್ದೇವೆ ಎಂದರು.
ಸದ್ಯ ಈ ಕಾಯ್ದೆಯಡಿ ನ್ಯಾಯಾಲಯ ಯಾವ ಶುಲ್ಕವನ್ನು ಕಟ್ಟಲು ತಿಳಿಸುತ್ತದೆಯೋ ಅದರ ಆಧಾರದ ಮೇಲೆ ದಂಡ ಕಟ್ಟಿ ಮಾಲೀಕರು ವಾಹನಗಳನ್ನ ಪಡೆಯಬೇಕು. ಸದ್ಯ ಜನರ ಅನುಕೂಲಕ್ಕಾಗಿ ಮಾನವೀಯತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ವಾಹನ ತೆಗೆದುಕೊಂಡ ನಂತರ ಕೂಡಾ ಅನಗತ್ಯ ಸುತ್ತಾಡಬಾರದು. ಮತ್ತೆ ಮತ್ತೆ ಅನಗತ್ಯ ಓಡಾಟ ಮಾಡಿದ್ರೆ ವಾಹನ ನಿಮ್ಮ ಕೈ ಸೇರಲ್ಲ ಎಂದು ನಗರ ಆಯುಕ್ತರು ಎಚ್ಚರಿಸಿದ್ದಾರೆ.