ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಹೊಸ ಪೊಲೀಸ್ ಕಮೀಷನರ್... ಅಲೋಕ್ ಕುಮಾರ್ ಜಾಗಕ್ಕೆ ಭಾಸ್ಕರ್ ರಾವ್ - ಪೊಲೀಸ್ ಕಮೀಷನರ್

ಬೆಂಗಳೂರು ಪೊಲೀಸ್ ಕಮೀಷನರ್ ಬದಲಾವಣೆ ಬಗ್ಗೆ ಹಲವು ದಿನಗಳಿಂದ ಗಾಳಿ ಸುದ್ದಿ ಹರಿದಾಡುತ್ತಿತ್ತು. ಇದಲ್ಲದಕ್ಕೂ ತೆರೆ ಬಿದ್ದಿದ್ದು, ನಗರದ ನೂತನ ಕಮೀಷನರ್ ಆಗಿ ಭಾಸ್ಕರ್ ರಾವ್ ನೇಮಕಗೊಂಡಿದ್ದಾರೆ.

Bhaskar Rao,ಭಾಸ್ಕರ್ ರಾವ್

By

Published : Aug 2, 2019, 4:01 PM IST

Updated : Aug 2, 2019, 8:44 PM IST

ಬೆಂಗಳೂರು:ಹಲವು ದಿನಗಳಿಂದ ಬೆಂಗಳೂರು ಪೊಲೀಸ್ ಕಮೀಷನರ್ ಬದಲಾವಣೆ ಬಗ್ಗೆ ಕೇಳಿ ಬರುತ್ತಿದ್ದ ಗಾಳಿ ಸುದ್ದಿಗೆ ಕೊನೆಗೂ ತೆರೆ ಬಿದ್ದಿದ್ದು, ನಗರದ ನೂತನ ಕಮೀಷನರ್​ ಆಗಿ ಭಾಸ್ಕರ್ ರಾವ್ ನೇಮಕಗೊಂಡಿದ್ದಾರೆ.

ದೋಸ್ತಿ ಸರ್ಕಾರದಲ್ಲಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ನಂತರ ಎಡಿಜಿಪಿಯಾಗಿ ಬಡ್ತಿ ಪಡೆದು ಪೊಲೀಸ್ ಕಮೀಷನರ್ ಆಗಿದ್ದರು. ಅಲೋಕ್ ಕುಮಾರ್ ಕಮೀಷನರ್ ಆದ ಬೆನ್ನಲೇ ಹಿರಿಯ ಐಪಿಎಸ್ ಅಧಿಕಾರಿಗಳು ಒಳಗೊಳಗೆ ಬೇಸರ ವ್ಯಕ್ತಪಡಿಸಿದ್ದರು.

ಇದೆಲ್ಲದರ ನಡುವೆಯೂ ಭಾಸ್ಕರ್ ರಾವ್ ಪೊಲೀಸ್ ಕಮೀಷನರ್ ಆಗಿದ್ದು, ಅಧಿಕೃತವಾಗಿ ಘೋಷಣೆಯಾಗಿದೆ. ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಕೆಎಸ್​ಆರ್​ಪಿ ಸಿಬ್ಬಂದಿ ಸದೃಢಕ್ಕಾಗಿ ಸಿರಿಧ್ಯಾನ್ಯ ಊಟ ಪರಿಚಯಿಸಿದ್ದರು. ಅಲ್ಲದೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಬಡ್ತಿ ಭಾಗ್ಯ ನೀಡಿದ್ದರು.

ಇದರ ಜತೆಗೆ ಐಪಿಎಸ್​ ಅಧಿಕಾರಿಗಳಾಗಿದ್ದ ಉಮೇಶ್​ ಕುಮಾರ್​,ಹೇಮಂತ್​ ನಿಂಬಾಳ್ಕರ್​, ಬಿಆರ್​ ರವಿಕಾಂತೇಗೌಡ,ಆರ್ ಚೇತನ್​, ಡಿ ದೇವರಾಜ್​ ಹಾಗೂ ಎಂ ಅಶ್ವಿನಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದರಲ್ಲಿ ಉಮೇಶ್​ ಕುಮಾರ್​​​, ರವಿಕಾಂತೇಗೌಡ ಅವರ ವರ್ಗಾವಣೆ ಆದೇಶ ಹಿಂಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

Last Updated : Aug 2, 2019, 8:44 PM IST

ABOUT THE AUTHOR

...view details