ಬೆಂಗಳೂರು:ಕೊರೊನಾ ಸೋಂಕಿನ ಲಕ್ಷಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಸದ್ಯ ಸಿಲಿಕಾನ್ ಸಿಟಿಯ ವ್ಯಕ್ತಿಯೋರ್ವ ಹೆಲ್ಮೆಟ್ ನಿಂದಲೂ ಸೋಂಕು ಹರಡುವ ಭೀತಿ ಇದೆ ಎಂಬ ಅಂಶವನ್ನ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಗಮನಕ್ಕೆ ತಂದು, ಸಾಂಕ್ರಾಮಿಕ ರೋಗ ತಗ್ಗುವವರೆಗೂ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿ ಎಂದು ಟ್ವೀಟ್ ಮಾಡಿದ್ದಾನೆ.
ಜನ ತಮ್ಮ ತಮ್ಮ ಹೆಲ್ಮೆಟ್ ಗಳನ್ನು ತೆಗೆದು ಸಾರ್ವಜನಿಕ ಸ್ಥಳಗಳಲ್ಲಿನ ಟೇಬಲ್, ಕುರ್ಚಿ, ಇತರ ವಸ್ತುಗಳ ಮೇಲೆ ಇಡುತ್ತಿದ್ದಾರೆ. ಸಾಮಾನ್ಯವಾಗಿ ಹೆಲ್ಮೆಟ್ ಗಳನ್ನೂ ಯಾರೂ ಸ್ವಚ್ಛಗೊಳಿಸುವುದಿಲ್ಲ. ಸೋಂಕಿತ ವ್ಯಕ್ತಿ ಕೂಡ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆ ಹೆಲ್ಮೆಟ್ ಈ ರೀತಿ ಎಲ್ಲೆಂದರಲ್ಲಿ ಇಟ್ಟರೆ ಅದರಿಂದ ಸೋಂಕು ಪ್ರಸರಣ ಸಾಧ್ಯತೆ ಹೆಚ್ಚು. ಹೀಗಾಗಿ ಕೊರೊನಾ ಸಾಂಕ್ರಾಮಿಕ ಮುಕ್ತಾಯವಾಗುವ ವರೆಗೂ, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿನಾಯಿತಿ ನೀಡಿ ಎಂದು ಸಂಜಯ್ ಎಂಬ ವ್ಯಕ್ತಿ ಟ್ವಿಟರ್ ಖಾತೆಯಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನ ಕೇಳಿದ್ದಾನೆ.