ಕರ್ನಾಟಕ

karnataka

ETV Bharat / state

ದೇಶ ಒಗ್ಗೂಡಿಸುವ ನಿರ್ಣಯದ ಫಲವೇ ಭಾರತ ಜೋಡೋ ಯಾತ್ರೆ: ಡಿಕೆಶಿ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬಿಜೆಪಿಯವರು ಹರ್ ಘರ್ ತಿರಂಗ ಮಾಡಿ ತ್ರಿವರ್ಣಧ್ವಜವನ್ನು ಮಾರಿದರು. ಆದರೆ ಕಾಂಗ್ರೆಸಿಗರು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿ ಹೊಸ ಇತಿಹಾಸ ಬರೆದರು. ದೇಶವನ್ನು ಒಗ್ಗೂಡಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸಬೇಕು. ಹಾಗಾಗಿ ಭಾರತ ಜೋಡೋ ಯಾತ್ರೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Bharat Jodo Yatra
ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆ

By

Published : Sep 1, 2022, 7:57 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೂ ದೇಶಕ್ಕೂ ವಿಶೇಷ ಸಂಬಂಧವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ ಈಗ ದೇಶವನ್ನು ಒಗ್ಗೂಡಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸಬೇಕು. ಅದರ ಫಲವೇ ಭಾರತ ಜೋಡೋ ( ಐಕ್ಯತಾ) ಯಾತ್ರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ರಣದೀಪ್ ಸಿಂಗ್ ಸುರ್ಜೆವಾಲ ಸಭೆ:ಭಾರತ ಐಕ್ಯತಾ ಯಾತ್ರೆ ಕುರಿತು ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ಯಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಪಕ್ಷದ ಪದಾಧಿಕಾರಿಗಳು ಹಾಗೂ ಶಾಸಕರ ಜತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸಭೆ ಮಾಡಿ, ವಿವರವಾಗಿ ಚರ್ಚೆ ಮಾಡಿದ್ದಾರೆ. ನಿರುದ್ಯೋಗದ ವಿಚಾರವಾಗಿ ವಿಶೇಷ ಅಭಿಯಾನ ಮಾಡಲು ನಿರುದ್ಯೋಗಿಗಳ ಪಟ್ಟಿ ಮಾಡಲು ಯುವ ಕಾಂಗ್ರೆಸ್​ಗೆ ತಿಳಿಸಿದ್ದಾರೆ.

ಬೆಲೆ ಏರಿಕೆ ವಿರುದ್ಧ ಹೋರಾಟ:ಯುವ ಕಾಂಗ್ರೆಸ್​​ 30 ಸಾವಿರ ಜನರ ಪಟ್ಟಿ ಮಾಡಿದೆ. ಈ ನಿರುದ್ಯೋಗ ನಿಭಾಯಿಸಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಜನರ ಬದುಕಿನಲ್ಲಿ ನೆಮ್ಮದಿ ದೊರಕಿಸಿಕೊಡಲು ಪ್ರಯತ್ನಿಸಬೇಕು. ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ದೇಶದ ರಾಜಧಾನಿಯನ್ನಾಗಿ ಮಾಡಿದೆ. ನಮ್ಮ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರಸಗೊಬ್ಬರ, ಔಷಧಿ ಬೆಲೆ ಏರಿಕೆಯಾಗಿದೆ. ಅವರ ಬದುಕು ಭದ್ರಪಡಿಸಬೇಕು. ರೈತರ ಜತೆಗೆ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಹುಲ್ ಗಾಂಧಿ ಅವರು ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆ

ಬಿಜೆಪಿಯವರು ಹರ್ ಘರ್ ತಿರಂಗ ಮಾಡಿ ತ್ರಿವರ್ಣಧ್ವಜವನ್ನು ಮಾರಿದರು. ಆದರೆ ಕಾಂಗ್ರೆಸಿಗರು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿ ಹೊಸ ಇತಿಹಾಸ ಬರೆದರು. ಜನರನ್ನು ರಕ್ಷಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅತ್ಯುತ್ತಮ ಗೆಲುವು ದಾಖಲಿಸಿದೆ. ರಾಜ್ಯದ ಶಿಕ್ಷಕರು, ಪಧವೀದರರು, ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಈ ಸಾಧನೆಗೆ ನಾವು ಕಾರಣವಲ್ಲ. ನಿಮ್ಮ ಶ್ರಮದ ಫಲ ಈ ಗೆಲುವು.

21 ದಿನ ಪಾದಯಾತ್ರೆ:ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ 21 ದಿನ ಸಮಯ ನೀಡಿ ಪಾದಯಾತ್ರೆ ಮಾಡುತ್ತಿರುವುದು ನಮಗೆ ಶಕ್ತಿಯಾಗುತ್ತದೆ. ರಾಜ್ಯದ ಎಲ್ಲ ಶಾಸಕರು ತಮಗೆ ನಿಗದಿ ಮಾಡಿರುವ ದಿನದಂದು ಈ ಯಾತ್ರೆಗೆ ತಮ್ಮ ಖರ್ಚಿನಲ್ಲಿ ಕನಿಷ್ಠ 5 ಸಾವಿರ ಜನರನ್ನು ಕಡ್ಡಾಯವಾಗಿ ಕರೆತರಬೇಕು. ಪರಾಜಿತ ಅಭ್ಯರ್ಥಿಗಳು ತಮ್ಮದೇ ಪೋಸ್ಟರ್ ಹಾಕಿಕೊಂಡು ಹೆಚ್ಚಿನ ಜನರನ್ನು ಕರೆತರಬೇಕು. ದೂರದ ಕ್ಷೇತ್ರದ ಜನರಿಗೂ ಅವಕಾಶ ನೀಡಲಾಗಿದೆ. ಒಂದೊಂದು ದಿನ 10 ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ. ಆ ಮೂಲಕ 224 ಕ್ಷೇತ್ರಗಳಿಗೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಬ್ಲಾಕ್ ಮಟ್ಟದಲ್ಲಿ ತಯಾರಿ ಸಭೆ: ನೀವೆಲ್ಲಾರು ವಿಧಾನಸೌಧದಲ್ಲಿ ಓಡಾಡಬೇಕು, ಅಧಿಕಾರ ಅನುಭವಿಸಬೇಕು ಎಂಬುದು ನಮ್ಮ ಆಸೆ. ನೀವಿಲ್ಲದಿದ್ದರೆ ನಾವು ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನ್ಯಾಕುಮಾರಿಯಲ್ಲಿ ಸೆ. 7 ರಂದು ಪಾದಯಾತ್ರೆ ಆರಂಭಿಸುತ್ತಿದ್ದಾರೆ. ನಾವು ಕೆಲವು ನಾಯಕರು ಹೋಗಿ ಭಾಗವಹಿಸಿ ವಾಪಸಾಗುತ್ತೇವೆ. 7 ರಂದು ಸಂಜೆ 5 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಸದ್ಭಾವನಾ ಯಾತ್ರೆ ಮಾಡಬೇಕು. 8, 9 ಹಾಗೂ 10 ರಂದು ಎಲ್ಲ 224 ಕ್ಷೇತ್ರಗಳಲ್ಲಿ ಒಂದೊಂದು ದಿನ ಭಾರತ ಜೋಡೋ ಯಾತ್ರೆ ವಿಚಾರವಾಗಿ ಬ್ಲಾಕ್ ಮಟ್ಟದಲ್ಲಿ ತಯಾರಿ ಸಭೆ ಮಾಡಬೇಕು.

ಇದನ್ನೂ ಓದಿ:ಬಿಜೆಪಿಯದ್ದು ಧರ್ಮ ರಾಜಕಾರಣ.. ನಮ್ಮದು ಅಭಿವೃದ್ಧಿ ಸಿದ್ಧಾಂತ: ದಿಗ್ವಿಜಯ್ ಸಿಂಗ್

ಈ ಸಭೆಯಲ್ಲಿ ಸಂಯೋಜಕರು ಇರುತ್ತಾರೆ. ಜಿಲ್ಲಾ, ಬ್ಲಾಕ್, ಪಂಚಾಯಿತಿ ಮಟ್ಟದಲ್ಲಿ ಎಲ್ಲರಿಗೂ ಉಸ್ತುವಾರಿ ಜವಾಬ್ದಾರಿ ನೀಡಿ. ರಾಜ್ಯದಲ್ಲಿ 21 ದಿನಗಳ ಕಾಲ ನಡೆಯುವವರಿಗೆ ಅವಕಾಶ ನೀಡುತ್ತೇವೆ. ಅದರ ಜತೆಗೆ ನೀವು ನಿಮ್ಮ ಕ್ಷೇತ್ರದಲ್ಲೂ ಸಂಘಟನೆ ಆಗುತ್ತಿರಬೇಕು. ನೀವು ಇದಕ್ಕೆ ನೋಂದಣಿ ಮಾಡಿಕೊಳ್ಳಬೇಕು. ನೀವು ಒಂದು ದಿನವಾದರೂ ನಡೆಯಬಹುದು. 21 ದಿನವಾದರೂ ಬರಬಹುದು. ಕೇವಲ ಫೋಟೋಗೆ ಬರುವವರು ಖಂಡಿತಾ ಬರಬೇಡಿ. ಯಾರೆಲ್ಲಾ ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೀರೋ ಅವರು ಕಂಟ್ರೋಲ್ ರೂಮ್ ಗೆ ಮಾಹಿತಿ ಕಳುಹಿಸಬೇಕು ಎಂದರು.

ಸಮರ್ಥರ ಪಟ್ಟಿ ನೀಡಿ: ಬ್ಲಾಕ್, ಡಿಸಿಸಿ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಯಾರೆಲ್ಲ ನಡೆಯಲು ಸಮರ್ಥರೋ ಅವರ ಪಟ್ಟಿಯನ್ನು ನೀಡಿ. ಎಲ್ಲ ಕ್ಷೇತ್ರಗಳಿಗೆ ಕೆಲವರಿಗೆ ಉಸ್ತುವಾರಿ ವಹಿಸುತ್ತೇವೆ. ಎಐಸಿಸಿ ಕಾರ್ಯದರ್ಶಿಗಳು ಈಗಾಗಲೇ ತೀರ್ಮಾನಿಸಿದ್ದು, ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಹೊಸದಾಗಿ ನೇಮಕಗೊಂಡಿರುವ ಪದಾಧಿಕಾರಿಗಳ ಕೆಲಸಗಳನ್ನು ಪರಿಶೀಲಿಸಲಾಗುವುದು. ಬ್ಲಾಕ್ ಅಧ್ಯಕ್ಷರೇ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೀಗಾಗಿ ನಿಮ್ಮನ್ನು ಕರೆಸಿ ಮಾತನಾಡುತ್ತಿದ್ದೇವೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು. ನಂತರ ಮಾರ್ಗ ಮಧ್ಯೆಯಲ್ಲಿ ಸಣ್ಣ ಪುಟ್ಟ ಸಭೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details