ಕರ್ನಾಟಕ

karnataka

ETV Bharat / state

ಲಂಚಕ್ಕೆ ಡಿಮ್ಯಾಂಡ್: ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ!

ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ ಬಿದ್ದಿದ್ದಾನೆ.

Bribe case in Bengaluru  Bescom Worker Engineer arrested by ACB  ACB raid on BESCOM  Bengaluru crime news,  ಬೆಂಗಳೂರು ಲಂಚ ಪ್ರಕರಣ  ಬೆಸ್ಕಾಂ ಕಾರ್ಯಪಾಲಕ ಅಭಿಯಂತರನ್ನು ಬಂಧಿಸಿದ ಎಸಿಬಿ  ಬೆಸ್ಕಾಂ ಮೇಲೆ ಎಸಿಬಿ ದಾಳಿ  ಬೆಂಗಳೂರು ಅಪರಾಧ ಸುದ್ದಿ
ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ

By

Published : Feb 18, 2022, 3:23 AM IST

ಬೆಂಗಳೂರು:ಟೆಲಿಕಾಂ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಅಪಾರ್ಟ್‌ಮೆಂಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು 9 ಲಕ್ಷ ರೂಗೆ ಬೇಡಿಕೆ ಇಟ್ಟು 5 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ವರ್ಕಿಂಗ್​ ಇಂಜಿನೀಯರ್​ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಗವಾರದ ಇ-9 ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಸುಂದರೇಶ್ ನಾಯ್ಕ್​ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಓದಿ:ಉಗ್ರರ ಅಟ್ಟಹಾಸ: ಎರಡು ಕಡೆ ಸ್ಫೋಟಕ ಪತ್ತೆ, ಮತ್ತೊಂದೆಡೆ CRPF ಪಡೆ ಮೇಲೆ ಗ್ರೆನೇಡ್​ ದಾಳಿ

ಚೆಲ್ಲಿಕೆರೆ ನಿವಾಸಿಯೊಬ್ಬರ ಮಾವ ಟೆಲಿಕಾಂ ಲೇಔಟ್‌ನಲ್ಲಿ ನಿಯಮ ಉಲ್ಲಂಘಿಸಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ನೀಡಿರುವ ವಿದ್ಯುತ್ ಸ್ಥಗಿತಗೊಳಿಸುವುದಾಗಿ ದೂರುದಾರರಿಗೆ ತಿಳಿಸಿದ್ದರು. ಈ ಬಗ್ಗೆ ದೂರುದಾರರು ನಾಗವಾರದ ಇ-9 ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಸಂದರೇಶ್ ನಾಯ್ಕ್ ರನ್ನು ಭೇಟಿಯಾಗಿದ್ದಾರೆ.

ಇಂಜನೀಯರ್​ ಸಂದರೇಶ್​ಗೆ ವಿದ್ಯುತ್ ಸ್ಥಗಿತಗೊಳಿಸದಿರಲು ಮನವಿ ಮಾಡಿದ್ದರು. ಆದರೆ, ಆರೋಪಿತ ಅಧಿಕಾರಿ 9 ಲಕ್ಷ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಫೆಬ್ರವರಿ 16ರಂದು ಎಇಇ ತಮ್ಮ ಕಚೇರಿಯಲ್ಲಿ ದೂರುದಾರರಿಂದ 5 ಲಕ್ಷ ರೂ ಲಂಚ ಪಡೆಯುವಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ABOUT THE AUTHOR

...view details