ಕರ್ನಾಟಕ

karnataka

ETV Bharat / state

ಬೆಂಗಳೂರು: ಹಸೆಮಣೆ ಏರಬೇಕಿದ್ದ ಜೋಡಿ... ಗ್ಯಾಸ್ ಗೀಸರ್ ಸೋರಿಕೆಯಾಗಿ ಬಾತ್ ರೂಂನಲ್ಲೇ ಸಾವು! - ಜೊತೆಯಾಗಿ ಸ್ನಾನ ಮಾಡಲು ಬಾತ್ ರೂಮ್

Bengaluru tragedy: ಹಸೆಮಣೆ ಏರುವ ಮುನ್ನ ಜೊತೆಯಲ್ಲಿ ಸ್ನಾನಕ್ಕೆ ಹೋದ ಜೋಡಿಯೊಂದು ಬಾತ್​ರೂಂನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುನ್ನೆಲೆಗೆ ಬಂದಿದೆ.

Bengaluru tragedy  couple who had gone for a bath  couple who had gone for a bath were found dead  ಹಸಮೆಣೆ ಏರುವ ಮುನ್ನ ಜೊತೆಯಲ್ಲಿ ಸ್ನಾನ  ಸ್ನಾನಕ್ಕೆ ಹೋದ ಜೋಡಿಯೊಂದು ಬಾತ್​ರೂಂನಲ್ಲಿ ಶವವಾಗಿ ಪತ್ತೆ  ಕೆಲವೇ ದಿನಗಳಲ್ಲಿ ಅವರಿಬ್ಬರು ಸತಿಪತಿ  ಸತಿಪತಿಗಳಾಗಿ ದಾಂಪತ್ಯ ಜೀವನ  ಜೊತೆಯಾಗಿ ಸ್ನಾನ ಮಾಡಲು ಬಾತ್ ರೂಮ್  ಯಲಹಂಕ ತಾಲೂಕಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಘಟನೆ
ಹಸಮೆಣೆ ಏರುವ ಮುನ್ನ ಜೊತೆಯಲ್ಲಿ ಸ್ನಾನಕ್ಕೆ ಹೋದ ಜೋಡಿ

By

Published : Jun 12, 2023, 12:45 PM IST

Updated : Jun 12, 2023, 1:55 PM IST

ಬೆಂಗಳೂರು:ಕೆಲವೇ ದಿನಗಳಲ್ಲಿ ಅವರಿಬ್ಬರು ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಮದುವೆ ಮುನ್ನ ಜೊತೆಯಾಗಿಯೇ ಕಾಲ ಕಳೆಯುತ್ತಿದ್ದರು. ಈ ಕ್ರಮದಲ್ಲಿ ಜೊತೆಯಾಗಿ ಸ್ನಾನ ಮಾಡಲು ಬಾತ್ ರೂಮ್​ಗೆ ಹೋಗಿದ್ರು, ಗ್ಯಾಸ್ ಗೀಸರ್​ನಿಂದ ವಿಷ ಅನಿಲ ಸೋರಿಕೆ ಆಗಿ, ಸೇವನೆ ಮಾಡಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಎರಡು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

Bengaluru tragedy:ಯಲಹಂಕ ತಾಲೂಕಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಿವಾಸಿ ಸುಧಾರಾಣಿ ಎಂದು ಗುರುತಿಸಲಾಗಿದೆ. ಬಾತ್​ರೂಂನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾತ್ ರೂಂನಲ್ಲಿ ಕಾರ್ಬನ್ ಮೊನಾಕ್ಸೆಡ್ ಸೋರಿಕೆಯಾಗಿ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಜೋಡಿ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮನೆ ಮಾಲೀಕರು ಹೇಳಿದ್ದೇನು?: ಜೂನ್ 10ರ ರಾತ್ರಿ ಸಮಯದಲ್ಲಿ ಚಂದ್ರಶೇಖರ್ ಮತ್ತು ಸುಧಾರಾಣಿ ಇಬ್ಬರು ಸ್ನಾನ ಮಾಡಲು ಹೋಗಿದ್ರು. ಈ ವೇಳೆ ಸಾವನ್ನಪ್ಪಿದ್ದಾರೆ. ಅವರಿಬ್ಬರು ಮನೆಯಿಂದ ಹೊರಗೆ ಬಾರದಿದ್ದಾಗ ಅನುಮಾನವಾಯಿತು. ಭಾನುವಾರ ಬೆಳಗ್ಗೆ ಮನೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ವಿಷಯ ತಿಳಿಸಿದ್ದು, ಬಾಗಿಲು ಮುರಿದು ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಓದಿ:Tragedy Honeymoon: ಹನಿಮೂನ್​ಗೆಂದು ಇಂಡೋನೇಷ್ಯಾಕ್ಕೆ ತೆರಳಿದ್ದ ವೈದ್ಯ ದಂಪತಿ ಸಮುದ್ರಪಾಲು!

ಇಂಡೋನೇಷ್ಯಾದಲ್ಲಿ ತಮಿಳು ವೈದ್ಯ ದಂಪತಿ ಸಾವು:ನೂರಾರು ಕನಸುಗಳನ್ನು ಹೊತ್ತು, ಸುಖವಾಗಿ ಜೀವನ ಸಾಗಿಸಬೇಕು ಎಂದು ಕೊಂಡಿದ್ದ ವೈದ್ಯ ದಂಪತಿ ಮದುವೆಯಾಗಿ ಒಂದು ವಾರ ಕಳೆಯುವುದರ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಜೂನ್ 1 ರಂದು ಇಬ್ಬರೂ ಮದುವೆಯಾಗಿದ್ದು, ಹನಿಮೂನ್‌ಗಾಗಿ ಬಾಲಿಗೆ ತೆರಳಿದ್ದರು. ಮದುವೆಯ ಹೊಸದರಲ್ಲಿ ಫೋಟೋಶೂಟ್ ಈಗೀಗ ತುಂಬಾ ಕಾಮನ್​​. ಬಹುಶಃ ಹೀಗೆ ಯೋಚಿಸಿ, ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್ ಸಮಯದಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸಮುದ್ರಕ್ಕೆ ತೆರಳಿದ್ದರು. ಆದರೆ, ಇದು ಅವರ ಕೊನೆಯ ಸವಾರಿ ಎಂದು ಅವರಿಗೆ ತಿಳಿದಿರಲಿಲ್ಲ.

Tragedy Honeymoon:ಮಾಧ್ಯಮಗಳ ವರದಿಯ ಪ್ರಕಾರ, ಮೃತರು ವೈದ್ಯ ದಂಪತಿಯಾದ ಲೋಕೇಶ್ವರನ್ ಮತ್ತು ವಿಭೂಶಾನಿಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜೂನ್ 1 ರಂದು ಪೂನಮಲ್ಲಿಯ ಮದುವೆ ಮಂಟಪದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೋಟೋಶೂಟ್ ವೇಳೆ ನೀರಿನಲ್ಲಿ ಮುಳುಗಿ ದಂಪತಿ ಸಾವನ್ನಪ್ಪಿರುವ ಬಗ್ಗೆ ಇಬ್ಬರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದರು.

ಜೂನ್​ 1ಕ್ಕೆ ಮದುವೆ, ಜೂನ್​ 9ಕ್ಕೆ ಸಾವು:ಸೇಲ್ವಂ ಕುಟುಂಬಸ್ಥರು ತಮಿಳುನಾಡಿನ ಪೂಂತಮಲ್ಲಿಗೆ ಪಕ್ಕದ ಸೆನ್ನೆರ್ಕುಪ್ಪಂದ ನಿವಾಸಿ. ಅವರ ಮಗಳು ವಿಭೂಷಣಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಜೂನ್ 1ರಂದು ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಪೂಂತಮಲ್ಲಿಗೆಯ ಖಾಸಗಿ ಮದುವೆ ಮಂಟಪದಲ್ಲಿ ಚೆನ್ನೈನ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಲೋಕೇಶ್ವರನ್ ಜೊತೆ ವಿಭೂಷಣಿಯ ವಿವಾಹವಾಗಿತ್ತು.

ನವವಿವಾಹಿತರು ಹನಿಮೂನ್​ಗಾಗಿ ಇಂಡೋನೇಷ್ಯಾಕ್ಕೆ ತೆರಳಿದ್ದರು. ಈ ವೇಳೆ ಜೂನ್ 9 ರಂದು ಅಲ್ಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದರು. ಸಮುದ್ರದಲ್ಲಿ ಸ್ಫೀಡ್​ ಬೋಟ್ ರೈಡಿಂಗ್​ ಜೊತೆ ಫೋಟೋ ಶೂಟ್ ಕೂಡ ನಡೆಸಿದ್ದರು ಎನ್ನಲಾಗಿದೆ. ಅನಿರೀಕ್ಷಿತವಾಗಿ ಇಬ್ಬರೂ ಸಮತೋಲನ ಕಳೆದುಕೊಂಡು ಏಕಾಏಕಿ ಸಮುದ್ರಕ್ಕೆ ಬಿದ್ದಿದ್ದರಿಂದ ದಂಪತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 12, 2023, 1:55 PM IST

ABOUT THE AUTHOR

...view details