ಬೆಂಗಳೂರು:ಹೆತ್ತ ತಾಯಿಯೇ ತನ್ನ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದ ಘಟನೆಯಲ್ಲಿ ಕಂದಮ್ಮ ಕೆಲಕಾಲ ಜೀವಂತವಾಗಿತ್ತು. ಕಟ್ಟಡದಿಂದ ಬಿದ್ದಿದ್ದ ಮಗುವನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ನಿಮಾನ್ಸ್‌ಗೆ ಸೇರಿಸುವ ಮಾರ್ಗ ಮಗು ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕಟ್ಟಡದಿಂದ ತಾಯಿಯೇ ಮಗು ಎಸೆದ ಪ್ರಕರಣ ಆಗಸ್ಟ್ 4ರಂದು ಸಂಪಂಗಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುಷ್ಮಾ ಎಂಬಾಕೆ ತನ್ನ 5 ವರ್ಷದ ಮಗು ದ್ವಿತಿಯನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ಎಸೆದು, ತಾನೂ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಳು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಪತಿ ಕಿರಣ್ ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಗುವಿಗೆ ಮಾತು ಬರುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ತಾಯಿ ಆಟವಾಡಿಸುವುದಾಗಿ ಅತ್ತೆಗೆ ಹೇಳಿ ಹೊರಗೆ ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು:ನಾಲ್ಕನೇ ಮಹಡಿಯಿಂದ ಬಿದ್ದ ಕಂದಮ್ಮ ರಕ್ತದ ಮಡುವಿನಲ್ಲಿ ಒದ್ದಾಡುತ್ತಿತ್ತು. ಈ ವೇಳೆ ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಮೀಪದ ನರ್ಸಿಂಗ್ ಹೋಂಗೆ ಬಂದ ತಕ್ಷಣ ಚಿಕಿತ್ಸೆ ನೀಡಿ ಸಿಪಿಆರ್ ಮಾಡಿದ್ದ ಡಾಕ್ಟರ್ ಮೋಹಿನಿ ಅವರು ಕಾರ್ಡಿಯಾ ಪಲ್ಮನರಿ ರಿಟ್ರಾಕ್ಷನ್ (ಸಿಪಿಆರ್) ಮಾಡಿದ ನಂತರ ಮಗುವಿಗೆ ಉಸಿರಾಟ ಬಂದಿತ್ತು. ಸಿಪಿಆರ್ ಮಾಡಿದ ನಂತರ ಮಗುವಿಗೆ ಪಲ್ಸ್ ಮತ್ತು ಉಸಿರಾಟ ಬಂದಿತ್ತು. ತಕ್ಷಣ ಮಗುವನ್ನು ನಿಮ್ಹಾನ್ಸ್ ಶಿಫ್ಟ್ ಮಾಡಲು ವೈದ್ಯರು ಸೂಚನೆ ನೀಡಿದ್ದರು. ಆದರೆ ನಿಮ್ಹಾನ್ಸ್ಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯ ಮಗು ಮೃತಪಟ್ಟಿದೆ.
ಮಗು ಕಾಲು ಜಾರಿ ಬಿದ್ದಿದೆ ಎಂದು ಕೃತ್ಯದ ಬಳಿಕ ಸುಷ್ಮಾ ಸುಳ್ಳು ಹೇಳಿದ್ದಳು. ಆದರೆ ಸಿಸಿಟಿವಿ ದೃಶ್ಯ ಎಲ್ಲವನ್ನೂ ತೆರೆದಿಟ್ಟಿದೆ. ಇದರಿಂದ ಸುಷ್ಮಾ ವಿರುದ್ಧ ಪತಿ ಕಿರಣ್ ದೂರು ನೀಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ತಾಯಿ ಸುಷ್ಮಾ ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಕರೆತಂದಾಗಲೂ ತನ್ನದೇನೂ ತಪ್ಪಿಲ್ಲ ಎಂದು ನಾಟಕವಾಡಿದ್ದಾಳೆ. ತಾನೂ ಸಹ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ. ಆದರೆ ಪೊಲೀಸರು ಸಿಸಿಟಿವಿ ದೃಶ್ಯ ತೋರಿಸಿದ ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬೆಂಗಳೂರು: ಬಿಲ್ಡಿಂಗ್ನಿಂದ ಕಂದಮ್ಮನನ್ನ ಕೆಳಕ್ಕೆ ಎಸೆದು ಹತ್ಯೆ ಮಾಡಿದ ತಾಯಿ!