ಬೆಂಗಳೂರು :ವರುಣಾರ್ಭಟಕ್ಕೆ( Heavy rain in Bengaluru) ಬೆಂಗಳೂರು ಅಕ್ಷರಶಃ ಮುಳುಗಿದೆ. ಹಲವೆಡೆ ಕೆರೆ ಕೋಡಿ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಯಲಹಂಕ ಸುತ್ತಮುತ್ತ ಕಂಡು ಕೇಳರಿಯದ (Flood in Yalahanka) ಪ್ರವಾಹದ ಸ್ಥಿತಿ ನಿರ್ಮಾಣವಾದ ಪರಿಣಾಮ ಜನ ತತ್ತರಿಸಿದ್ದಾರೆ.
ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಅಪಾರ್ಟ್ಮೆಂಟ್ಗಳ ಅಡಿಪಾಯ ನೀರಿನಲ್ಲಿ ಮುಳುಗಡೆ(Apartments submerged in water)ಯಾಗಿವೆ. ಸಾವಿರಾರು ನಿವಾಸಿಗಳು ಮನೆಯಿಂದ ಹೊರ ಬರಲಾಗದೆ ಕಂಗಾಲಾಗಿದ್ದಾರೆ.
ಯಲಹಂಕದಲ್ಲಿ ನಿನ್ನೆ ಒಂದೇ ರಾತ್ರಿಯಲ್ಲಿ 144 ಮಿ.ಮೀ ಮಳೆಯಾಗಿದೆ. ಅಟ್ಟೂರು ಲೇಔಟ್ನಲ್ಲಿ 102 ಮಿ.ಮೀ ಹಾಗೂ ದಾಸರಹಳ್ಳಿಯಲ್ಲಿ 105 ಮಿ.ಮೀ ಮಳೆಯಾಗಿದೆ.
ಹಲವಾರು ಮನೆ/ಅಪಾರ್ಟ್ಮೆಂಟ್ಗಳಲ್ಲಿ ಹಾಸಿಗೆ, ಬಟ್ಟೆ, ಆಹಾರ ಸಾಮಗ್ರಿಗಳೆಲ್ಲಾ ನೀರು ಪಾಲಾಗಿವೆ. ಹತ್ತಿರದ ಕೆರೆಗಳು ಕೋಡಿ ಒಡೆದಿರುವುದರಿಂದ ಹಾವು-ಚೇಳುಗಳು ಮನೆಯೊಳಗೆ ಬರುವಂತಾಗಿದೆ. ಅಲ್ಲದೇ, ಬೈಕ್, ಕಾರು, ಆಟೋಗಳು ನೀರಿನಲ್ಲಿ ತೇಲಾಡುತ್ತಿವೆ.