ಬೆಂಗಳೂರು:ಮಸೀದಿಯೊಂದರ ಅಧ್ಯಕ್ಷ ಪಟ್ಟದ ವಿಚಾರಕ್ಕೆ ಗಲಾಟೆ ನಡೆದು ಸಹೋದರನ ಮಗನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಸಿಟಿ ಮಾರ್ಕೆಟ್ ವಾರ್ಡ್ ಮಾಜಿ ಕಾರ್ಪೊರೇಟರ್ ಆಯುಬ್ ಖಾನ್ ಮೃತಪಟ್ಟಿದ್ದಾರೆ. ಆರೋಪಿ ಮತೀನ್ ಬುಧವಾರ ಚಾಕುವಿನಿಂದ ಹಲ್ಲೆ ಮಾಡಿದ್ದ.
ಘಟನೆಗೆ ಮಸೀದಿ ಅಧ್ಯಕ್ಷ ಪಟ್ಟವೇ ಕಾರಣ ಎಂದು ಆಯುಬ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಟಿಪ್ಪುನಗರದ ಖುದಾಯತ್ ಮಸೀದಿಗೆ ಆಯುಬ್ ಅಧ್ಯಕ್ಷರಾಗಿದ್ದರು. ಈ ಸ್ಥಾನ ಬಿಟ್ಟುಕೊಡುವಂತೆ ಆಯುಬ್ ಅಣ್ಣನ ಮಗ ಮತೀನ್ ಆಗಾಗ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಈ ಹಿಂದೆ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ.