ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೊರೊನ ಭೀತಿಗಿಂತ ಹೆಚ್ಚಾಗಿ ಮಂಗನ ಕಾಯಿಲೆ ಆತಂಕವಿದೆ: ಬೇಳೂರು ಗೋಪಾಲಕೃಷ್ಣ

ರಾಜ್ಯದಲ್ಲಿ ಕೊರೊನ ಭೀತಿಗಿಂತ ಹೆಚ್ಚಾಗಿ ಮಂಗನ ಕಾಯಿಲೆ ಆತಂಕವಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

_BELOOR_GOPALKRISHNA pressmeet in bengaluru
ಬೇಳೂರು ಗೋಪಾಲಕೃಷ್ಣ

By

Published : Mar 18, 2020, 3:22 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಭೀತಿಗಿಂತ ಹೆಚ್ಚಾಗಿ ಮಂಗನ ಕಾಯಿಲೆ ಆತಂಕವಿದೆ. ಸಿಎಂ ಯಡಿಯೂರಪ್ಪನವರ ಕ್ಷೇತ್ರದಲ್ಲಿ ಕೂಡ ಸಮಸ್ಯೆ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಬೇಳೂರು ಗೋಪಾಲಕೃಷ್ಣ

ವಿಧಾನಸೌಧ ಕಾಂಗ್ರೆಸ್​​​ ಶಾಸಕಾಂಗ ಇವತ್ತು ಕೆಲವು ಆಸ್ಪತ್ರೆಗೆ ಹೋದ್ರೆ ಅಲ್ಲಿ ಸಾವಿನ ಕೂಪವಾಗಿದೆ ಎಂದು ಹೇಳುತ್ತಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಒಂದು ವಿಶೇಷವಾದ ಆಸ್ಪತ್ರೆ ತೆಗೆಯಬೇಕು. ಚೀನಾದಲ್ಲಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆ ಕಟ್ಟುತ್ತಾರೆ. ನಮ್ಮಲ್ಲೇಕೆ ಆಗಲ್ಲಾ? ಆದಷ್ಟು ಬೇಗ ಆಸ್ಪತ್ರೆ ನಿರ್ಮಾಣ ಮಾಡಬೇಕು. ಸೊರಬದಿಂದ ಯಾವನೋ ಆರಿಸಿ ಬಂದು ಈ ಮಂಗನ ಕಾಯಿಲೆ ಹರಡಿದೆ. ಮೊದಲು ಕಾಗೋಡು ತಿಮ್ಮಪ್ಪ , ನಾವು ಇರುವಾಗ ಇರಲಿಲ್ಲ ಎಂದು ಪರೋಕ್ಷವಾಗಿ ಶಾಸಕ ಹಾಲಪ್ಪರನ್ನು ಅಣಕಿಸಿದರು.

ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಯಲ್ಲಿ ಕೈವಾಡ:

ಸಾಗರದಲ್ಲಿ ಹರೀಶ್ ಮತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾವು ಯಾರದೋ ಕೈವಾಡದಿಂದ ನಡೆದಿದೆ. ಹರೀಶ್ ಮತ್ತು ಪತ್ನಿ ಬಿಜೆಪಿ ಕಟ್ಟಾಳುಗಳು. ಇವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಹಲವಾರು ಜನರು ಹೋರಾಟ ಮಾಡಿದ್ದಾರೆ. ಜೊತೆಗೆ ಬಿಜೆಪಿ ಕೂಡ ಕೈ ಜೋಡಿಸಿದೆ ಎಂದಿದ್ದಾರೆ. ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಇಂಥ ಕೇಸ್​​ ಯಾವುದಾದ್ರು ಇದ್ರೆ ಬಾಯಿ ಬಡಿದುಕೊಳ್ಳುತ್ತಿದ್ರು. ಇವಾಗ ಯಾಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದ್ರು.

ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಸೌಜನ್ಯಕ್ಕಾದ್ರು ಆ ಪಾರ್ಟಿಯವರು ಭೇಟಿ ಕೊಟ್ಟಿಲ್ಲ.ಈ ಘಟನೆಗೆ ಸಾಗರ ಎಂಎಲ್ಎ ಹಾಲಪ್ಪ ಅವರ ಪಿಎ ವಾಟೆ ಮಕ್ಕಿ ನಾಗರಾಜ್ ಕಾರಣ. ಈ ಹಿಂದೆ ಒಂದು ಪ್ರಕರಣ ಇತ್ತು ಎಂದು ವಿವರಿಸಿದರು. ಪರೇಶ್​​ ಮೇಸ್ತಾ ಪ್ರಕರಣಕ್ಕಿಂತ ದೊಡ್ಡ ಪ್ರಕರಣ ಇದು, ರಾಜ್ಯ ಸರ್ಕಾರದಿಂದ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿರಬಹುದು. ಜೊತೆಗೆ ಸಾಗರದಲ್ಲಿ ನಡೆಯುತ್ತಿರುವ ಹಲವಾರು ಕೊಲೆಗಳನ್ನು ಹಾಲಪ್ಪ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.ಇವರೆಲ್ಲಾ ಏನ್ ಮಹಿಳೆಯರ ರಕ್ಷಣೆ ಮಾಡುತ್ತಾರೊ ಗೊತ್ತಿಲ್ಲ ಎಂದರು.

ABOUT THE AUTHOR

...view details