ಬೆಂಗಳೂರು :ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಅಂದ್ರೆ ಪ್ರಜಾಪ್ರಭುತ್ವದ ದೇಗುಲ. ಅದಕ್ಕೆ ಅದರದ್ದೇ ಆದ ಗೌರವ, ಪಾವಿತ್ರತೆ ಇದೆ. ಆದರೆ, ಇಂಥ ಕೇಂದ್ರದಲ್ಲಿ ಬಿಯರ್ ಬಾಟಲ್ಗಳು ಪತ್ತೆಯಾಗಿದೆ.
ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಇದೇ ಸಂದರ್ಭ ವಿಧಾನಸೌಧದ ಎರಡನೇ ಮಹಡಿಯಲ್ಲಿ ಬಿಯರ್ ಬಾಟಲ್ಗಳು ಪತ್ತೆಯಾಗಿದೆ. ಆದರೆ, ಯಾರು ಇದನ್ನು ಇಲ್ಲಿ ತಂದು ಇಟ್ಟರು? ಎಂಬುವುದು ಗೊತ್ತಾಗಿಲ್ಲ. ಬಿಗಿ ಭದ್ರತೆ, ತಪಾಸಣೆ ನಡುವೆಯೂ ಬಿಯರ್ ಬಾಟಲ್ಗಳು ಶಕ್ತಿ ಕೇಂದ್ರ ಸೇರಿದ್ದು ಹೇಗೆ? ಎಂಬ ಅನುಮಾನ ಮೂಡಿದೆ. ಕಿಡಿಗೇಡಿಗಳು ಶಕ್ತಿ ಕೇಂದ್ರದಲ್ಲೇ ಎಣ್ಣೆ ಪಾರ್ಟಿ ನಡೆಸಿದ್ದಾರಾ? ಎಂಬ ಅನುಮಾನವೂ ಮೂಡಿದೆ.