ಬೆಂಗಳೂರು: ರಾಜ್ಯಾದ್ಯಂತ ಎಲ್ಲರೂ ದೀಪಾವಳಿ ಹಬ್ಬದ ಸಡಗರದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವ ಇಚ್ಚೆಯಲ್ಲಿದ್ದಾರೆ. ಆದರೆ, ಈ ಸಂಭ್ರಮದಿಂದಾಗಿ ಯಾವುದೇ ಹಾನಿಯುಂಟುಮಾಡಿಕೊಳ್ಳದಿರಿ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತ ರಾಥೋಡ್ ಸಲಹೆ ನೀಡಿದ್ದಾರೆ.
ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸಂತಸದಲ್ಲಿ 50 ರಿಂದ 60 ಜನರು ಕಣ್ಣಿಗೆ ಗಾಯಗೊಂಡು ಚಿಕಿತ್ಸೆಗೆ ಬರುತ್ತಾರೆ. ಆದರೆ, ಈ ವರ್ಷ ಹಸಿರು ಪಟಾಕಿ ಮಾತ್ರ ಎಂದು ಸರ್ಕಾರ ಹೇಳಿದೆ. ಈ ಹಸಿರು ಪಟಾಕಿ ಕೂಡ ಹೇಳುವಷ್ಟು ಅಪಾಯರಹಿತವಾದುದಲ್ಲ.