ಕರ್ನಾಟಕ

karnataka

ETV Bharat / state

ನ್ಯಾಯಾಂಗ ನಿಂದನೆ ಆರೋಪ.. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಿದ ಬಿಡಿಎ

ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಹಿತಿ ನೀಡಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

By

Published : Jun 29, 2021, 5:26 PM IST

ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಡಿಎ ಎಂಜಿನಿಯರ್ ಆರ್.ಕೆ ಮೋಹನ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಡಾ.ಶಿವರಾಮ ಕಾರಂತ ಬಡಾವಣೆ ವಿರೋಧಿಸಿ ಪ್ರತಿಭಟನೆ ಮಾಡಿ ಬಿಡಿಎ ವಿರುದ್ಧ ಸಾರ್ವಜನಿಕರು, ಭೂಮಾಲೀಕರು, ರೈತರನ್ನು ಎತ್ತಿಕಟ್ಟಿದ ಆರೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಎಫ್​.ಐ.ಆರ್ ದಾಖಲಿಸಲಾಗಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಹಿತಿ ನೀಡಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ ದಾಖಲೆಗಳನ್ನು ನೀಡದಂತೆ ಹೇಳಿ ಕೋಡಿಹಳ್ಳಿ ಜನರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದರೆಂದು ಬಿಡಿಎ ಅಸಮಾಧಾನ ಹೊರಹಾಕಿದೆ.

ಪ್ರಕರಣದ ಹಿನ್ನೆಲೆ:

3,456 ಎಕರೆ ಜಾಗದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣವಾಗುತ್ತಿದೆ. ಈ ಮೊದಲು ಹೈಕೋರ್ಟ್ ಸ್ಟೇ ಕೊಟ್ಟಿತ್ತು. ಇತ್ತೀಚಿಗೆ ಸುಪ್ರಿಂ ಕೋರ್ಟ್ ಸುಮಾರು 4 ವರ್ಷಗಳ ನಂತರ ಸ್ಟೇ ರದ್ದು ಮಾಡಿ ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿ ಅಭಿವೃದ್ಧಿ ಪಡಿಸಲು ಸೂಚಿಸಿತ್ತು. ಈ ವೇಳೆ ಕಳೆದ ತಿಂಗಳು ಕೋಡಿಹಳ್ಳಿ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು. ಜನರ ಅಹವಾಲು ಸ್ವೀಕರಿಸಲು ಸಮಿತಿ 4 ಕಡೆಗಳಲ್ಲಿ ಕೇಂದ್ರ ಸ್ಥಾಪಿಸಿತ್ತು.

ಆದರೆ ಕೋಡಿಹಳ್ಳಿ ಚಂದ್ರಶೇಖರ್ ಸೂಕ್ತ ದಾಖಲೆಗಳ‌ ನೀಡದಂತೆ ಎತ್ತಿಕಟ್ಟಿದ ಆರೋಪ ಎದುರಾಗಿದೆ. ಕಳೆದ ಮಾರ್ಚ್ 23 ರಂದು‌ ಬಿಡಿಎ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ನಂತರ ಮಾರ್ಚ್ 24ರ ಪ್ರತಿಭಟನೆ ವೇಳೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಾತನಾಡಿದ ಹಾಗೂ ಈ ಮೂಲಕ ಅಶಾಂತಿಗೆ ಕಾರಣರಾಗಿದ್ದಾರೆಂದು ದೂರು ನೀಡಲಾಗಿದೆ.

ABOUT THE AUTHOR

...view details