ಕರ್ನಾಟಕ

karnataka

ETV Bharat / state

ಕೋವಿಡ್​​ ಕರ್ತವ್ಯದಿಂದ ಮರಳುವಂತೆ ಸಚಿವಾಲಯ ಸಿಬ್ಬಂದಿಗೆ ಬಿಬಿಎಂಪಿ ಆದೇಶ - ಬಿಬಿಎಂಪಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್

ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಮರಳಿ ಸಚಿವಾಲಯದ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದೆ. ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬೆನ್ನಲ್ಲೆ ಬಿಬಿಎಂಪಿ ವಿಶೇಷ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

BBMP
ಬಿಬಿಎಂಪಿ ಕಚೇರಿ

By

Published : Nov 24, 2020, 11:50 AM IST

ಬೆಂಗಳೂರು: ಕೋವಿಡ್ ಕರ್ತವ್ಯದಲ್ಲಿದ್ದ ಸಚಿವಾಲಯ ಸಿಬ್ಬಂದಿಗೆ ಪುನಃ ಸಚಿವಾಲಯದ ಕರ್ತವ್ಯಕ್ಕೆ ಮರಳುವಂತೆ ಆದೇಶ ನೀಡಲಾಗಿದೆ.

ಮುಖ್ಯ ಕಾರ್ಯದರ್ಶಿ ಆದೇಶದಂತೆ ಒಂದು ದಿನ ಸಚಿವಾಲಯದ ಕೆಲಸ, ಒಂದು ದಿನ ಕೋವಿಡ್ ನಿಯಂತ್ರಣ ಡ್ಯೂಟಿ ನಿರ್ವಹಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್ ಸುತ್ತೋಲೆ ಹೊರಡಿಸಿದ್ದಾರೆ.

ಸಚಿವಾಲಯ ಸಿಬ್ಬಂದಿಗೆ ಬಿಬಿಎಂಪಿ ಆದೇಶ ಪತ್ರ

ಕೋವಿಡ್-19 ನಗರದಲ್ಲಿ ತೀವ್ರವಾಗಿ ಹಬ್ಬುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಸಚಿವಾಲಯದ ಎಲ್ಲ ಅಧಿಕಾರಿ, ನೌಕರರನ್ನೂ ಕೋವಿಡ್ ಕರ್ತವ್ಯಕ್ಕೆ ಬಿಬಿಎಂಪಿಯ ವಿವಿಧ ವಲಯಗಳಲ್ಲಿ ನಿಯೋಜಿಸಲಾಗಿತ್ತು.

ಈಗ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಜೊತೆಗೆ ಸಚಿವಾಲಯಕ್ಕೆ ಸಿಬ್ಬಂದಿ ಕರ್ತವ್ಯ ಅಗತ್ಯ ಇರುವುದರಿಂದ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ABOUT THE AUTHOR

...view details