ಕರ್ನಾಟಕ

karnataka

ETV Bharat / state

ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆ ಶುಲ್ಕ ವಿಧಿಸಲು ಪಾಲಿಕೆ ನಿರ್ಧಾರ: ಜನರಿಗೆ ಬೀಳುತ್ತಾ ಹೆಚ್ಚುವರಿ ಹೊರೆ? - bbmp new garbage charges

ಬಿಬಿಎಂಪಿ ರೂಪಿಸಿದ ಕಸ ನಿರ್ವಹಣೆ ಉಪ ನಿಯಮ - 2020ಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇನ್ನು ಮುಂದೆ ಪ್ರತ್ಯೇಕವಾಗಿ ಕಸ ನಿರ್ವಹಣೆಗೆ ಶುಲ್ಕ ಸಂಗ್ರಹಣೆ ಮಾಡಲಾಗುತ್ತದೆ.

bbmp new garbage charges
ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆಗೆ ಅಸ್ತು

By

Published : Jun 10, 2020, 3:13 PM IST

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದ ಕಸ ನಿರ್ವಹಣೆ ಉಪ ನಿಯಮ 2020ಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪ್ರತ್ಯೇಕವಾಗಿ ಕಸ ನಿರ್ವಹಣೆಗೆ ಇನ್ಮುಂದೆ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಭೆ ಸಮಾರಂಭಗಳಿಂದ ಬಿಬಿಎಂಪಿ ಶುಲ್ಕ ಸಂಗ್ರಹಿಸಲಿದೆ.

ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆ ಅಸ್ತು

ಅಲ್ಲದೇ ನಿಯಮ ಉಲ್ಲಂಘಿಸಿ ಕಸ ಬಿಸಾಡುವವರಿಗೆ, ಪ್ಲಾಸ್ಟಿಕ್ ಬಳಕೆದಾರರಿಗೆ ಭಾರೀ ದಂಡ ವಿಧಿಸಲು ಅನುಮೋದನೆ ಸಿಕ್ಕಿದೆ. ಕಸ ನಿರ್ವಹಣೆಗೆ ಪಾಲಿಕೆ ವರ್ಷಕ್ಕೆ 1000 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಆದ್ರೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗ್ತಿರೋ ಉಪಕರ ಕೇವಲ 40 ಕೋಟಿ ರೂ. ಹೀಗಾಗಿ ಬಿಬಿಎಂಪಿ ಈ ನಿಯಮ ಜಾರಿಗೆ ಮುಂದಾಗಿದೆ. ಪ್ರಮುಖವಾಗಿ ಕಸದಿಂದ ಗೊಬ್ಬರ ಮಾಡುವವರಿಗೆ, ಬಯೋಗ್ಯಾಸ್ ಉತ್ಪಾದಿಸುವವರಿಗೆ ಶೇಕಡಾ 50 ರಷ್ಟು ಸೇವಾ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ.

ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆಗೆ ಅಸ್ತು

ಈ ಕುರಿತು ಮಾತನಾಡಿದ, ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ರಂದೀಪ್, ಆಸ್ತಿ ತೆರಿಗೆ ಜೊತೆಯೇ ಘನತ್ಯಾಜ್ಯ ನಿರ್ವಹಣೆ ಸೆಸ್ ಬರುತ್ತಿತ್ತು. ಆದ್ರೆ ಇನ್ಮುಂದೆ ಪ್ರತ್ಯೇಕವಾಗಿ ಘನತ್ಯಾಜ್ಯ ನಿರ್ವಹಣೆ ಉಪಕರವನ್ನು ವಿಧಿಸಲಾಗುವುದು. ಪೌರಕಾರ್ಮಿಕರ ಕೈಯಲ್ಲಿ ನಿತ್ಯ ನಗರ, ಬೀದಿ ಸ್ವಚ್ಛ ಮಾಡುತ್ತೇವೆ. ಎಸ್ ಡಬ್ಲ್ಯೂ ಎಮ್- 2016 (solid waste management) ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ನಗರ ಪಾಲಿಕೆ ಸೇವಾ ಶುಲ್ಕ ವಿಧಿಸುವ ಅಧಿಕಾರ ಇದೆ. ಇದನ್ನು ಬಳಕೆ ಮಾಡಿಕೊಂಡು ಬಿಬಿಎಂಪಿ ಬೈಲಾದಲ್ಲಿ ಈ ಅಂಶ ಅಳವಡಿಸಿಕೊಂಡಿದೆ.

ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆ ಅಸ್ತು
ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆ ಅಸ್ತು

ಘನತ್ಯಾಜ್ಯ ನಿರ್ವಹಣೆಗೆ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಸೇವಾಶುಲ್ಕ ವಿಧಿಸುತ್ತಿದ್ದೇವೆ. ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ಸೇವಾಶುಲ್ಕ ವಿಧಿಸುವ ರೀತಿ ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಳ್ಳುವುದಕ್ಕೆ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂದರು. ಪ್ರತೀ ಮನೆಗೆ ಇನ್ನೂರು ರುಪಾಯಿ ಪ್ರತೀ ತಿಂಗಳು ಶುಲ್ಕ ಬೀಳಲಿದೆ. 10 ಕೆಜಿ ಗಿಂತ ಹೆಚ್ಚಿದ್ರೆ ಮಾತ್ರ ಬಲ್ಕ್ ಜನರೇಷನ್ ಅಂತ ಇತ್ತು. ಈಗ ನೂರು ಕೆಜಿ ವರೆಗೆ ಕಸವನ್ನು ಬಿಬಿಎಂಪಿಯೇ ನಿರ್ವಹಣೆ ಮಾಡಲಿದೆ. ವಿವಿಧ ಹಂತಗಳಲ್ಲಿ 600 ರಿಂದ 14,000 ದ ವರೆಗೆ ಶುಲ್ಕ ನಿಗದಿ ಮಾಡಲಾಗಿದೆ ಎಂದರು.

ಪ್ರತ್ಯೇಕ ಘನತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ವಿಧಿಸಲು ಪಾಲಿಕೆಗೆ ಅಸ್ತು
ಶುಲ್ಕದ ವಿವರ:ಮನೆಗಳಿಗೆ - 200 ರೂವಾಣಿಜ್ಯ ಸಂಸ್ಥೆನಿತ್ಯ 5 ಕೆ.ಜಿಗಿಂತ ಕಡಿಮೆ ಕಸಕ್ಕೆ - 500 ರೂ. 5 ರಿಂದ 10 ಕೆ.ಜಿಗಿಂತ ಕಡಿಮೆ - 1400 ರೂ. 25 ಕೆ.ಜಿ ಗಿಂತ ಕಡಿಮೆ- 3500 ರೂ. 50 ಕೆ.ಜಿಗಿಂತ ಕಡಿಮೆ -7000 ರೂ. 100 ಕೆ.ಜಿಗಿಂತ ಕಡಿಮೆ - 14000 ರೂ. ಇದಲ್ಲದೇ ಸಭೆ ಸಮಾರಂಭಗಳ ಕಸ ಪಾಲಿಕೆಗೆ ನೀಡಿದರೆ, ಪ್ರತ್ಯೇಕ ಶುಲ್ಕ ಇರಲಿದೆ.

ABOUT THE AUTHOR

...view details