ಬೆಂಗಳೂರು :ಲಾಕ್ಡೌನ್ ನೆಪವೊಡ್ಡಿಸಾರ್ವಜನಿಕರು ಮತ್ತು ಮಾಧ್ಯಮದವರು ತಮ್ಮ ಕಚೇರಿಗೆ ಬರುವುದನ್ನು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ನಿರ್ಬಂಧಿಸಿದ್ದಾರೆ.
ಲಾಕ್ಡೌನ್ ನೆಪದಲ್ಲಿ ಕಚೇರಿ ಭೇಟಿಗೆ ನಿರ್ಬಂಧ ಹೇರಿದ ಬಿಬಿಎಂಪಿ ಮೇಯರ್
ಮಾಧ್ಯಮದವರು ಮತ್ತು ಸಾರ್ವಜನಿಕರು ತಮ್ಮ ಕಚೇರಿ ಭೇಟಿಗೆ ಬಿಬಿಎಂಪಿ ಮೇಯರ್ ನಿರ್ಬಂಧ ಹೇರಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.
ಕಚೇರಿ ಭೇಟಿಗೆ ನಿರ್ಬಂಧ ಹೇರಿದ ಬಿಬಿಎಂಪಿ ಮೇಯರ್
ಅಷ್ಟೇ ಅಲ್ಲದೆ ವೈದ್ಯಕೀಯ ನೆರವು ಕೋರಿ ಬರುವವರ ಅರ್ಜಿಯನ್ನೂ ಜೂನ್ ಅಂತ್ಯದವರೆಗೆ ಸ್ವೀಕರಿಸುವುದಿಲ್ಲ ಎಂದು ನೋಟಿಸ್ ಹಾಕಲಾಗಿದೆ. ನಗರದ ಜನ, ಸಂಘ ಸಂಸ್ಥೆಗಳು ಮಧ್ಯಾಹ್ನ ಮೂರು ಗಂಟೆಯ ಬಳಿಕ ಮಹಾಪೌರರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಈಗ ಸಾರ್ವಜನಿಕರು ಹಾಗೂ ಮಾಧ್ಯಮವರಿಗೆ ಭೇಟಿಗೆ ನಿರ್ಬಂಧ ಹೇರಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ಕೋವಿಡ್ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಮೇಯರ್ ಈ ರೀತಿಯ ಕ್ರಮಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.