ಬೆಂಗಳೂರು:ಬಿಬಿಎಂಪಿ ಚುನಾವಣೆಗೆ ಒಂದು ವಾರ ಇರುವಾಗಲೇ ಆಪರೇಷನ್ ಕಮಲ ಶುರುವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ಜೊತೆಗಿದ್ದ ಪಕ್ಷೇತರರಲ್ಲಿ ನಾಲ್ವರು ಪಕ್ಷೇತರ ಪಾಲಿಕೆ ಸದಸ್ಯರಿಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗ್ತಿದೆ.
ಬಿಬಿಎಂಪಿಯಲ್ಲೂ ಆಪರೇಷನ್ ಕಮಲ..? ನಾಲ್ವರು ಪಕ್ಷೇತರರಿಗೆ ಗಾಳ....!
ಬಿಬಿಎಂಪಿ ಚುನಾವಣೆಗೆ ಒಂದು ವಾರ ಇರುವಾಗಲೇ ಆಪರೇಷನ್ ಕಮಲ ಶುರುವಾಗಿದ್ದು,ನಾಲ್ವರು ಪಕ್ಷೇತರ ಪಾಲಿಕೆ ಸದಸ್ಯರಿಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ. ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ಗೆಲುವಿಗೆ ನಿರ್ಣಾಯಕರಾಗಿರುವುದರಿಂದ ಮೂವರು ಪಕ್ಷೇತರ ಸದಸ್ಯರನ್ನು ನಗರದ ಬಿಜೆಪಿ ಶಾಸಕರೊಬ್ಬರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಪಕ್ಷೇತರ ಸದಸ್ಯರಾದ ಲಕ್ಷ್ಮಿನಾರಾಯಣ್ (ಗುಂಡಣ್ಣ), ರಮೇಶ್ ಹಾಗೂ ಆನಂದ್ ಹಾಗೂ ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಗಾಯತ್ರಿ ಅವರನ್ನು ಬಿಜೆಪಿ ಶಾಸಕರೊಬ್ಬರು ಗೋವಾಗೆ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪಕ್ಷೇತರ ಸದಸ್ಯರ ಮೊಬೈಲ್ ಫೋನ್ಗಳು ಸಂಪರ್ಕಕ್ಕೆ ಸಿಗದಿರುವುದು ಇದನ್ನು ಮತ್ತಷ್ಟು ಪುಷ್ಟೀಕರಿಸಿದೆ. ನಾಲ್ವರ ಫೋನ್ ನಂಬರ್ಗಳೂ ಸ್ವಿಚ್ ಆಫ್ ಬರುತ್ತಿದೆ. ಹೀಗಾಗಿ ಮೇಯರ್ ಚುನಾವಣೆಗೆ ಒಂದು ವಾರ ಇರುವಾಗಲೇ ಆಪರೇಷನ್ ಕಮಲ ಆರಂಭವಾಗಿದೆ.
ಇನ್ನು,ಕಾಂಗ್ರೆಸ್‌ನಿಂದ ಕೂಡ ಹಲವು ಸದಸ್ಯರು ಬಿಜೆಪಿಗೆ ಬರಲಿದ್ದಾರೆ ಎಂಬ ಮುನ್ಸೂಚನೆಗಳು ಸಿಕ್ಕಿದ್ದು, ಈ ಬಾರಿಯ ಮೇಯರ್ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.