ಕರ್ನಾಟಕ

karnataka

ETV Bharat / state

BMTC ಪ್ರಯಾಣಿಕರಿಗೆ ಸಿಹಿ ಸುದ್ದಿ: ಜೂನ್​ 21ರಿಂದ ಬಸ್​ ಸಂಚಾರ ಆರಂಭ..ಆದರೆ ಷರತ್ತು ಅನ್ವಯ!

ಮೊದಲ ಹಂತದ ಲಾಕ್‌ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಅಂತ ಬಿಬಿಎಂಪಿ ಹೇಳಿತ್ತು. ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದ್ರೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್​ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಪಾಲಿಕೆ ಮನವಿ ಕೂಡ ಮಾಡಿತ್ತು. ಆದ್ರೀಗ ಒತ್ತಡ ಹೆಚ್ಚಾದ ಕಾರಣ, ಬೇಡಿಕೆಗೆ ಬಿಬಿಎಂಪಿ ಮಣಿದು ಸೋಮವಾರದಿಂದ ನಗರದಲ್ಲಿ ಬಸ್​ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.

bmtc
ಬಿಎಂಟಿಸಿ

By

Published : Jun 17, 2021, 5:05 PM IST

Updated : Jun 17, 2021, 5:28 PM IST

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಅನ್​ಲಾಕ್​ ಜೂನ್ 21ರಿಂದ‌ ಆಗಲಿದೆ. ಅಂದಿನಿಂದಲೇ ಬೆಂಗಳೂರಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ‌ ಸಂಚಾರ ನಡೆಸದೇ ಸ್ಥಗಿತಗೊಂಡಿದ್ದ ಬಿಎಂಟಿಸಿ‌ ಸಂಚಾರ ಆರಂಭವಾಗಲಿದೆ. ಈ ಬಗ್ಗೆ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ಕೂಡ ನಿರ್ಧರಿಸಿದೆ.

ಈಗಾಗಲೇ ನಗರದಲ್ಲಿ ಬಿಎಂಟಿಸಿ ಬಸ್​ಗಳನ್ನ ರಸ್ತೆಗಿಳಿಸಲು ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಒತ್ತಡ ಶುರುವಾಗಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್​ ಸಂಚಾರಕ್ಕೆ ಅವಕಾಶ ನೀಡುವಂತೆ ಬಿಬಿಎಂಪಿ ಮೇಲೆ ಒತ್ತಡ ಹೇರಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಮಾತನಾಡಿದರು

ಮೊದಲ ಹಂತದ ಲಾಕ್‌ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಅಂತ ಬಿಬಿಎಂಪಿ ಹೇಳಿತ್ತು. ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದ್ರೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್​ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಪಾಲಿಕೆ ಮನವಿ ಕೂಡ ಮಾಡಿತ್ತು. ಆದ್ರೀಗ ಒತ್ತಡ ಹೆಚ್ಚಾದ ಕಾರಣ, ಬೇಡಿಕೆಗೆ ಬಿಬಿಎಂಪಿ ಮಣಿದು ಸೋಮವಾರದಿಂದ ನಗರದಲ್ಲಿ ಬಸ್​ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.

ಬಸ್​ಗಳಿಗೆ ಅನುಮತಿ ನೀಡಿದ್ರೆ ಏನೆಲ್ಲಾ ಷರತ್ತುಗಳನ್ನು ವಿಧಿಸಬೇಕು ಎಂಬುದರ ಬಗ್ಗೆ ಮುಖ್ಯ ಆಯುಕ್ತ ಗೌರವ್​ ಗುಪ್ತಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ನೀಡಿದೆ. ಈ ವಿಚಾರವಾಗಿ ಆಯುಕ್ತ ಗೌರವ್​ ಗುಪ್ತಾ ಬಿಎಂಟಿಸಿ ಎಂಡಿ ಜತೆ ಮಾತುಕತೆ ನಡೆಸಿ, ಜತೆಗೆ ನಗರ ಪೊಲೀಸ್​ ಕಮಿಷನರ್​, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದಾರೆ.

ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ಹಾಕಿದ ಷರುತ್ತುಗಳು

- ಶೇಕಡಾ 50ರಷ್ಟು ಬಸ್​ಗಳನ್ನು ಮಾತ್ರ ರಸ್ತೆಗಿಳಿಸಲು ಅನುಮತಿ

- ಬಸ್​ಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುಮತಿ

- ಮಾಸ್ಕ್,‌ ಸಾಮಾಜಿಕ ಅಂತರ ಪಾಲನೆ ಕಡ್ಡಾಯ

- ಬಸ್​ಗಳಲ್ಲಿ ಆಸನಗಳ ಮಧ್ಯೆ ಅಂತರವಿಟ್ಟುಕೊಂಡು ಕುಳಿತುಕೊಂಡು ಪ್ರಯಾಣಿಸಲು ಅವಕಾಶ

- ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ

- ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್​ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ

- ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯ

- ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್​ ಸಂಚಾರ ನಿಲ್ಲಿಸಬೇಕು

ಓದಿ:'ನೀರಿ' ಶಿಫಾರಸ್ಸಿನಂತೆ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ: ಹೈಕೋರ್ಟ್​ಗೆ ಬಿಬಿಎಂಪಿ ಮಾಹಿತಿ

Last Updated : Jun 17, 2021, 5:28 PM IST

ABOUT THE AUTHOR

...view details