ಕರ್ನಾಟಕ

karnataka

By

Published : Sep 28, 2019, 5:46 PM IST

ETV Bharat / state

ಅನಧಿಕೃತ ಒಎಫ್​ಸಿ ಕೇಬಲ್​ಗಳನ್ನು ತೆರವು ಮಾಡುತ್ತಾ ಬಿಬಿಎಂಪಿ?

ನಗರದ ಫುಟ್​​ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​ಸಿ) ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಓಎಫ್​ಸಿ ಕೇಬಲ್​

ಬೆಂಗಳೂರು:ಅನಧಿಕೃತ ಒಎಫ್​ಸಿ ಕೇಬಲ್​ಗಳ ಸಮಸ್ಯೆ ಮಿತಿಮೀರುತ್ತಿದ್ದರೂ ಪಾಲಿಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ನಿಜಕ್ಕೂ ಒಎಫ್​ಸಿ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಪಾದಾಚಾರಿಗಳಿಗೆ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಮರದಲ್ಲಿ ಜೋತಾಡುತ್ತಿರುವ ಒಎಫ್​ಸಿ ಕೇಬಲ್​ ವೈರ್​ಗಳು

ನಗರದ ಫುಟ್​​ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​​ಸಿ)ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ವಿವಿಧ ರೀತಿಯ ಅಂತರ್ಜಾಲ ಸೇವೆ, ದೂರವಾಣಿ ಸಂಪರ್ಕಗಳನ್ನು ನೀಡುವ ಕೇಬಲ್​ಗಳನ್ನು ಕಾನೂನು ಬಾಹಿರವಾಗಿ ನಗರಗಳಲ್ಲಿ ಅಳವಡಿಸಲಾಗಿದೆ. ನೆಲದಡಿಯಲ್ಲಿ ಕಾನೂನು ರೀತಿಯಲ್ಲಿ ಅಳವಡಿಸಬೇಕಾದ ಕೇಬಲ್​ಗಳನ್ನು ಜನರ, ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವ ರೀತಿ ಅಳವಡಿಸಿರುತ್ತಾರೆ. ರಸ್ತೆಗಳು, ಮರಗಳ ಮೇಲೆ ಕೇಬಲ್​​ಗಳು ಜೋತು ಬಿದ್ದಿವೆ. ಎಷ್ಟೋ ಸಾರಿ ಬೈಕ್ ಸವಾರರ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳೂ ಇವೆ. ಇಷ್ಟಾದರೂ ಅನಧಿಕೃತ ಕೇಬಲ್​​ಗಳನ್ನು ತೆಗೆಯಲು ಬಿಬಿಎಂಪಿ ವಿಫಲವಾಗಿತ್ತು. ಇದೀಗ ನೂತನ ಆಯುಕ್ತರು ಟ್ವೀಟ್ ಮಾಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮತ್ತು ಅನಧಿಕೃತ ಒಎಫ್​ಸಿ ಕೇಬಲ್​​ಗಳನ್ನು ತೆರವುಗೊಳಿಸಲಾಗಿದೆ.

ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ ಕೊನೆಯವರೆಗೂ ನಡೆಯಲಿದೆ. ಮಹದೇವಪುರ ಹಾಗೂ ಯಲಹಂಕ ವಲಯಗಳಿಗೆ ಈ ಕಾರ್ಯಾಚರಣೆಯನ್ನು ಅಕ್ಟೋಬರ್​ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details