ಕರ್ನಾಟಕ

karnataka

ETV Bharat / state

ಬಾರ್​ಗಳ ಮೇಲೆ ಸಿಸಿಬಿ ದಾಳಿ:  ತಪ್ಪಿಸಿಕೊಳ್ಳಲು ಯತ್ನಿಸಿ, ಗಾಯಗೊಂಡ ಬಾರ್​ಗರ್ಲ್​ - ccb raid

ಎರಡು ದಿನಗಳ ಹಿಂದೆ ನೈಟ್ ಬಾರ್ ಹಾಗೂ ಪೇಜ್ ತ್ರಿ ಡ್ಯಾನ್ಸ್ ಬಾರ್​ಗಳ ಮೇಲೆ ದಾಳಿ ನಡೆಸಿದ ಮಾಹಿತಿ ತಿಳಿದು ಪಕ್ಕದಲ್ಲೇ ಇದ್ದ ಕ್ಲಬ್​ನ ಬಾರ್ ಗರ್ಲ್ ಒಬ್ಬಳು ಆತಂಕದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದಿಂದ ಜಿಗಿದು ಗಾಯಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

bar girl

By

Published : Jul 28, 2019, 2:37 AM IST

ಬೆಂಗಳೂರು:ಬಾರ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದ ವೇಳೆ ಪರಾರಿಯಾಗುವ ಭರದಲ್ಲಿ ಬಾರ್​ಗರ್ಲ್​ವೊಬ್ಬಳು ಮಹಡಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದಾಳೆ.

ಗುರುವಾರ ರಾತ್ರಿ ಟೌನ್​ಹಾಲ್ ಬಳಿಯ ನೈಟ್ ಬಾರ್ ಹಾಗೂ ಎಂಜಿ ರಸ್ತೆ ಬಳಿಯ ಪೇಜ್ ತ್ರಿ ಬಾರ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಹಲವರನ್ನು ಬಂಧಿಸಿತ್ತು. ಪೊಲೀಸರ ದಾಳಿ ವಿಷಯ ತಿಳಿಯುತ್ತಿದ್ದಂತೆ ಆತಂಕದಿಂದ ಎಸ್ಕೇಪ್ ಆಗಲು ಯತ್ನಿಸಿದ ಬಾರ್​ಗರ್ಲ್​ವೊಬ್ಬಳು ಮಹಡಿಯಿಂದ ಕೆಳಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.

ಚಿಕಿತ್ಸೆ ಪಡೆಯುತ್ತಿರುವ ಬಾರ್​ ಗರ್ಲ್

ಪಶ್ಚಿಮ ಬಂಗಾಳ ಮೂಲದ ಆಕೆ ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಳು. ನಗರದ ಕ್ಲಬ್-ಪಬ್​ಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕ್ಷಣಾರ್ಧದಲ್ಲಿ ಬಾರ್​​ಗರ್ಲ್​​ಗಳಿಗೆ ಮಾಹಿತಿ ತಲುಪಿಸುವ ವ್ಯವಸ್ಥಿತ ಜಾಲವೊಂದಿದೆ. ಇದೇ ಜಾಲದ ಮೂಲಕ ಮಾಹಿತಿ ಪಡೆದು ಪರಾರಿಯಾಗಲು ಯತ್ನಿಸಿದ ಬಾರ್​​ಗರ್ಲ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆದರೆ ಈ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ ಎಂದಿರುವ ಅಶೋಕ ನಗರ ಪೊಲೀಸರು, ದೂರು ನೀಡಿದರೆ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details