ಕರ್ನಾಟಕ

karnataka

ETV Bharat / state

ಬ್ಯಾಂಕ್ ಆಫ್ ಬರೋಡಾ ಎಟಿಎಂ ಯಂತ್ರ ಕದ್ದೊಯ್ದ ಖದೀಮರು.. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ - ಪೊಲೀಸರು ಆರೋಪಿಗಳ ಪತ್ತೆಗೆ ಶೋಧ

ಬೆಂಗಳೂರು ನಗರದ ಹರಳೂರು ಎಟಿಎಂಗೆ ನುಗ್ಗಿದ ಖದೀಮರು ಎಟಿಎಂ ಯಂತ್ರವನ್ನು ಕದ್ದು ಪರಾರಿಯಾಗಿದ್ದಾರೆ.

Haralur ATM theft
ಹರಳೂರು ಎಟಿಎಂ ಕಳ್ಳತನ

By

Published : Dec 13, 2022, 1:41 PM IST

ಬೆಂಗಳೂರು:ನಗರದ ಹರಳೂರು ಎಟಿಎಂಗೆ ನುಗ್ಗಿದ ಖದೀಮರು ಎಟಿಎಂ ಯಂತ್ರ ಕದ್ದು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತಾಗಿ ಬ್ಯಾಂಕ್ ಆಫ್ ಬರೋಡಾ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಡಿಸೆಂಬರ್ 10ರಂದು ಬೆಳಗ್ಗೆ ಹರಳೂರು ರಸ್ತೆಯ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ್ದ ನಾಲ್ಕು ಮಂದಿ ಕಳ್ಳರು ಸಿಸಿಟಿವಿ ಕ್ಯಾಮರಾಗೆ ಬಣ್ಣ ಬಳಿದು ವೈರ್ ತುಂಡು ಮಾಡಿದ್ದಾರೆ. ಬಳಿಕ ಎಟಿಎಂ ಯಂತ್ರವನ್ನು ಟ್ರಕ್ ನಲ್ಲಿ ಕದ್ದೊಯ್ದಿದ್ದಾರೆ.

ಅಪರಿಚಿತರು ಎಟಿಎಂ ಯಂತ್ರ ಎಗರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಟಿಎಂ ಮಷಿನ್ ನಲ್ಲಿ ಅಂದಾಜು 31 ಲಕ್ಷ ಹಣ ಇದ್ದು, ಅದನ್ನು ಲಪಾಟಿಯಿಸಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಬೆಳ್ಳಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ಳಂದೂರು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

ಇದನ್ನೂಓದಿ:ಬೈಕ್​ ರೈಡ್​ ದುರಂತ.. ಉಳ್ಳಾಲದಲ್ಲಿ ರಸ್ತೆ ಅಪಘಾತಕ್ಕೆ ಮೆಡಿಕಲ್​ ವಿದ್ಯಾರ್ಥಿ ಬಲಿ

ABOUT THE AUTHOR

...view details