ಕರ್ನಾಟಕ

karnataka

By

Published : Oct 5, 2020, 10:08 PM IST

ETV Bharat / state

ರಾಜಧಾನಿಯಲ್ಲಿ ನಿಲ್ಲದ ಕೊರೊನಾ ಅಬ್ಬರ: 2,189 ಕೊರೊನಾ ಪಾಸಿಟಿವ್, 34 ಮಂದಿ ಬಲಿ

ಕಿಲ್ಲರ್​ ಕೊರೊನಾದಿಂದ ಬೆಂಗಳೂರು ನಗರದಲ್ಲಿಂದು 34 ಮಂದಿ ಮೃತಪಟ್ಟ ವರದಿಯಾಗಿದೆ.

Bangaluru COVID-19 Cases Report
ಸಂಗ್ರಹ ಚಿತ್ರ

ಬೆಂಗಳೂರು : ನಗರದಲ್ಲಿಂದು 2,189 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,52,229 ಕ್ಕೆ ಏರಿಕೆಯಾಗಿದೆ.

ಇಂದು 2,972 ಮಂದಿ ಗುಣಮುಖರಾಗಿದ್ದು, ಈವರೆಗೆ 1,95,015 ಮಂದಿ ಬಿಡುಗಡೆ ಹೊಂದಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 54,112 ಕ್ಕೆ ಏರಿಕೆಯಾಗಿದೆ. ಇಂದು 34 ಮಂದಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3101 ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 299ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details