ಕರ್ನಾಟಕ

karnataka

ETV Bharat / state

ಬೆಂಗಳೂರು ಟು ಕೊಡಗು: ಅಜ್ಜಿ - ತಾತನ ನೋಡಲು 30 ಕಿ.ಮೀ ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ..! - ಅಜ್ಜಿ-ತಾತನನ್ನು ನೋಡಲು ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ..

ಕೊಡಗಿನಲ್ಲಿರುವ ಅಜ್ಜಿ - ತಾತನ ನೋಡಲು ಬಾಲಕಿ ಬೆಂಗಳೂರಿನಿಂದ 30 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾಳೆ

ಅಜ್ಜಿ-ತಾತನನ್ನು ನೋಡಲು 30 ಕಿ.ಮೀ ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ.
ಅಜ್ಜಿ-ತಾತನನ್ನು ನೋಡಲು 30 ಕಿ.ಮೀ ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ.

By

Published : Sep 7, 2021, 10:07 AM IST

Updated : Sep 7, 2021, 11:51 AM IST

ಬೆಂಗಳೂರು: ಅಜ್ಜಿ - ತಾತನನ್ನು ನೋಡುವ ಹಂಬಲದಿಂದ ವಾಸ್ತವ್ಯ ಹೂಡಿದ್ದ ಸಂಬಂಧಿಕರ ಮನೆ ಬಿಟ್ಟು ನಾಪತ್ತೆಯಾಗಿದ್ದ ಬಾಲಕಿಯನ್ನು ಕೊನೆಗೂ ಬನಶಂಕರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಜ್ಜಿ-ತಾತನನ್ನು ನೋಡಲು 30 ಕಿ.ಮೀ ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ

15 ವರ್ಷದ ಬಾಲಕಿಯು ತನ್ನ ಅಜ್ಜಿ - ತಾತನನ್ನು ನೋಡುವ ಸಲುವಾಗಿ ಸುಮಾರು 240 ಕೀ.ಮಿ.ದೂರದ ಕೊಡಗಿನ ವಿರಾಜಪೇಟೆಗೆ ನಡೆದುಕೊಂಡು ಹೋಗಲು ಮುಂದಾಗಿದ್ದಾಳೆ. ಇದರಂತೆ‌ ಅಂದಾಜು 30 ಕಿ.ಮೀ ಕ್ರಮಿಸಿ ದಾರಿ ಕಾಣದೇ ಸುತ್ತಾಡುತ್ತಿದ್ದಾಗ ಮಹಿಳೆಯೊಬ್ಬರು ಆಶ್ರಯ ಕೊಟ್ಟಿದ್ದಾರೆ.

ವಿರಾಜಪೇಟೆ ಮೂಲದ ಅಯ್ಯಪ್ಪ ಎಂಬುವರು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.‌ ಕಳೆದ ವರ್ಷ ಅಯ್ಯಪ್ಪ, ಸಂಬಂಧಿಕರ ಮೊಮ್ಮಗಳಾದ ರೋಹಿತಾ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಯನ್ನು ವಿದ್ಯಾಭ್ಯಾಸದ ದೃಷ್ಟಿಯಿಂದ ಬೆಂಗಳೂರಿಗೆ ಕರೆ ತಂದಿದ್ದರು. ತಮ್ಮ‌ ಮನೆಯಲ್ಲಿ ಆಶ್ರಯ ನೀಡಿ ಯಡಿಯೂರಿನ ಸರ್ಕಾರಿ ಶಾಲೆಗೆ ಸೇರಿಸಿದ್ದರು‌.‌ ಆದರೆ, ಏಕಾಏಕಿ ಕಳೆದ‌ ಆಗಸ್ಟ್​​ 21 ರ ಮಧ್ಯಾಹ್ನ ಬಾಲಕಿ ನಾಪತ್ತೆಯಾಗಿದ್ದಳು.‌

ನಿರಂತರ ಶೋಧ ನಡೆಸಿದರೂ‌ ಬಾಲಕಿ ಪತ್ತೆಯಾಗದ ಕಾರಣ ಅಯ್ಯಪ್ಪ ಠಾಣೆಗೆ ಹೋಗಿ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಇನ್​ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ಸಬ್​ ಇನ್ಸ್​​​​​ಪೆಕ್ಟರ್​ ಮಂಜುನಾಥ್ ತಂಡ ತನಿಖೆ ಆರಂಭಿಸಿತ್ತು.

ತನಿಖೆಯ ಭಾಗವಾಗಿ ಬಸವನಗುಡಿ, ಚಾಮರಾಜಪೇಟೆ, ಮೈಸೂರು ರೋಡ್ ಮಾರ್ಗದ 250 ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯ ಪರಿಶೀಲಿಸಿದಾಗ ಬಾಲಿ ನಡೆದುಕೊಂಡು ಹೋಗಿರುವುದು ಕಂಡು ಬಂದಿತ್ತು. ಇದೇ ಆಧಾರದ ಮೇಲೆ ಪರಿಶೀಲಿಸಿದಾಗ ಆಕೆ ಕೆಂಗೇರಿಯ ಕೊಮ್ಮನಘಟ್ಟವರೆಗೂ ನಡೆದುಕೊಂಡು ಹೋಗಿದ್ದಳು. ಆ ನಂತರ ಕೊಮ್ಮಘಟ್ಟ, ತಾವರೆಕೆರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭಿತ್ತಿಪತ್ರ ಹಂಚಿ ಬಾಲಕಿ ಕಂಡರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದರು.

ಮಹಿಳೆಯೊಬ್ಬರ ಮನೆಯಲ್ಲಿ ಆಶ್ರಯ

ಬಾಲಕಿಯು ಬನಶಂಕರಿಯಿಂದ ಕೊಮ್ಮಘಟ್ಟವರೆಗೂ ನಡೆದು ಮುಂದೆ ದಿಕ್ಕು ಕಾಣದ ಹಿನ್ನೆಲೆ ರಸ್ತೆ ಬದಿ ನಿಂತಿದ್ದಾಗ, ಮಹಿಳೆಯೊಬ್ಬರು ಮಾತನಾಡಿಸಿದ್ದಾರೆ. ಈ ವೇಳೆ ಬಾಲಕಿಯು, ನನಗೆ ತಂದೆ - ತಾಯಿ ಯಾರೂ ಇಲ್ಲ. ನಾನು ಅಜ್ಜಿ - ತಾತನ ಮನೆಗೆ ಹೋಗಬೇಕು. ನನ್ನ ಸಂಬಂಧಿಕರು ಬಂದು ನನ್ನ ಕರೆದುಕೊಂಡು ಹೋಗುತ್ತಾರೆ. ಆವರೆಗೆ ಆಶ್ರಯ ಕೊಡಿ ಎಂದು ಕೇಳಿದ್ದಳು. ಬಾಲಕಿ ಮಾತು ನಂಬಿದ ಮಹಿಳೆ 10 ದಿನಗಳ ಕಾಲ ಆಶ್ರಯ ನೀಡಿದ್ದಳು.

ಪೊಲೀಸರ ನಿರಂತರ ಶೋಧದ ಬಳಿಕ‌ ಬಾಲಕಿ ಇರುವ ಸ್ಥಳ ಪತ್ತೆಯಾಗಿದ್ದು, ಆಕೆಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕಿ, ನನಗೆ ಅಜ್ಜಿ - ತಾತನ ನೆನಪಾಗುತ್ತಿತ್ತು. ಸಂಬಂಧಿಕರ ಮನೆಯಲ್ಲಿರುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ನಡೆದುಕೊಂಡೇ ಅಜ್ಜಿ - ತಾತನ ಬಳಿ ಹೋಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ

ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಕೊಡಗಿನಲ್ಲಿರುವ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.

Last Updated : Sep 7, 2021, 11:51 AM IST

ABOUT THE AUTHOR

...view details