ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಕ್ಕೆ ಮೂವರು ಬಲಿ...!

ಕೋಲ್ಕತ್ತಾ ಮೂಲದ ಅಮಿತ್ ಅಗರವಾಲ್ ಎಂಬಾತ ಸೋಮವಾರ ಬೆಂಗಳೂರಿನ ವೈಟ್​ಫೀಲ್ಡ್​​ನ ಗರುಡಾಚಾರ ಪಾಳ್ಯ ಬಳಿಯ ಅಪಾರ್ಟ್​​ಮೆಂಟ್​​ನಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು, ಬಳಿಕ ಕೋಲ್ಕತ್ತಾಗೆ ಹೋಗಿ ಅಲ್ಲಿ ಅತ್ತೆಯ ಜೊತೆ ಜಗಳವಾಡಿ ಗುಂಡಿಕ್ಕಿ​ ಕೊಂದಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Bangalore
ಕೌಟುಂಬಿಕ ಕಲಹಕ್ಕೆ ಮೂವರು ಬಲಿ

By

Published : Jun 23, 2020, 9:26 AM IST

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೋಲ್ಕತ್ತಾ ಮೂಲದ ಅಮಿತ್ ಅಗರವಾಲ್ (42) ಎಂಬಾತ ಈ ಕೃತ್ಯವೆಸಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಶಿಲ್ಪ (40) ಹಾಗೂ ಆಕೆಯ ತಾಯಿ ಲಲಿತಾ ದಂಧಾನಿಯಾ (70) ಹತ್ಯೆಯಾದ ದುರ್ದೈವಿಗಳು. ಇನ್ನು ಈ ಕೃತ್ಯ ಎಸಗಿದ ಬಳಿಕ ಅಮಿತ್‌ ಅಗರವಾಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೋಮವಾರ ವೈಟ್​ಫೀಲ್ಡ್​​ನ ಗರುಡಾಚಾರಪಾಳ್ಯ ಬಳಿಯ ಅಪಾರ್ಟ್​​ಮೆಂಟ್​​ನಲ್ಲಿ ಅಮಿತ್ ತನ್ನ ಪತ್ನಿ ಶಿಲ್ಪಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಕೋಲ್ಕತ್ತಾಗೆ ಹೋಗಿ ಅಲ್ಲಿ ಅತ್ತೆಯ ಜೊತೆ ಜಗಳವಾಡಿದ್ದಾನೆ. ಈ ವೇಳೆ, ಜಗಳ ವಿಕೋಪಕ್ಕೆ ತಿರುಗಿ ಅತ್ತೆಯನ್ನೂ ಗುಂಡಿಕ್ಕಿ​ ಕೊಂದಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಅಮಿತ್ ಬಳಿ‌ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಾನು ಬೆಂಗಳೂರಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾನೆ. ಕೂಡಲೇ ಕೋಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಹದೇವಪುರ ಪೊಲೀಸರು ಅಪಾರ್ಟ್​​ಮೆಂಟ್​ಗೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಅಡುಗೆ ಕೋಣೆಯಲ್ಲಿ ಮಹಿಳೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಮಹದೇವಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಶಿಲ್ಪಾ ಹಾಗೂ ಅಮಿತ್‌ ವಿವಾಹವಾಗಿದ್ದು, ಈ ದಂಪತಿಗೆ 8 ವರ್ಷದ ಮಗನಿದ್ದಾನೆ. ನಗರದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ದಂಪತಿ, ಮಹದೇವಪುರದ ಸಮೀಪದ ಮೆಟ್ರೋ ಪೊಲೀಸ್‌ ಅಪಾರ್ಟ್‌ಮೆಂಟ್‌ನ 5ನೇ ಹಂತದಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಸತಿ - ಪತಿ ಮಧ್ಯೆ ಸದಾ ಕಾಲ ಜಗಳ ನಡೆದಿತ್ತು ಎಂದು ಮೂಲಗಳು ಹೇಳಿವೆ.

ABOUT THE AUTHOR

...view details