ಬೆಂಗಳೂರು :ಮೂರು ದಿನಗಳ ಕಾಲ ನಡೆದ ಬೆಂಗಳೂರು ಟೆಕ್ ಸಮ್ಮಿಟ್ಗೆ ಅದ್ದೂರಿ ತೆರೆ ಬಿದ್ದಿದ್ದು, ಬ್ರೇಕಿಂಗ್ ಬೌಂಡರೀಸ್ ಘೋಷವಾಕ್ಯದೊಂದಿಗೆ ನಡೆದ ಈ ಬಾರಿಯ ಟೆಕ್ ಶೃಂಗವನ್ನು ಗ್ರೀನ್ ಬಿಟಿಎಸ್ ಎಂದು ಘೋಷಿಸಲಾಯಿತು. ನಗರದ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ ಮುಕ್ತಾಯದ ನಂತರ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ನೀಡಿದರು. ಅವರು ನೀಡಿದ ಅಂಕಿ-ಅಂಶದ ವಿವರ ಇಲ್ಲಿದೆ.
ಬೆಂಗಳೂರು ಟೆಕ್‌ಸಮ್ಮಿಟ್ 2023 ರ ಸಂಕ್ಷಿಪ್ತ ವಿವರ:
• ಭಾಗವಹಿಸಿದ ದೇಶಗಳ ಸಂಖ್ಯೆ: 45
• ಒಟ್ಟು ಅಧಿವೇಶನಗಳ ಸಂಖ್ಯೆ: 83
• ಒಟ್ಟು ಭಾಷಣಕಾರರ ಸಂಖ್ಯೆ: 401
• ನೋಂದಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ: 4773
• ಒಟ್ಟು ಪಾಲ್ಗೊಂಡವರ ಸಂಖ್ಯೆ: 8606
• ನೋಂದಾಯಿತ ವ್ಯಾಪಾರಸ್ಥರ ಸಂಖ್ಯೆ: 18,592
• ಎಕ್ಸ್‌ಪೋಗೆ ಭೇಟಿ ನೀಡಿದವರ ಸಂಖ್ಯೆ: 50,000ಕ್ಕೂ ಅಧಿಕ
• ಉತ್ಪನ್ನಗಳ ಬಿಡುಗಡೆ : 37
• ಪ್ರದರ್ಶಕರು : 553
ಅಧಿಕೃತ ಬಿಟಿಎಸ್ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್, ಇನ್‌ಸ್ಟಾಗ್ರಾಂ, ವೈಟಿ ಮೂಲಕ ತಲುಪಿದ ಪ್ರಮಾಣ
• ರೀಚ್: 3.16 ಕೋಟಿ
• ಇಂಪ್ರೆಷನ್ಸ್ : 5.9 ಕೋಟಿ
• ಯುನಿಕ್ ಕ್ಲಿಕ್‌ಗಳು: 2,43,455
• ಎಂಗೇಜ್ಮೆಂಟ್ಸ್: 5,88,475
B2B ಸಭೆಗಳು:
• ಸಮಿಟ್ ಸ್ಥಳದಲ್ಲಿ ನಡೆದ ಸಭೆಗಳು- 427
• ವರ್ಚುವಲ್ ಸಭೆಗಳು: 1981
ಎಕ್ಸ್ಪೋನಲ್ಲಿ ಭಾಗವಹಿಸಿದವರ ವಿವರ:
• 553 ಎಕ್ಸ್ಪೋನಲ್ಲಿ ಭಾಗವಹಿಸಿದವರು
• 258 ಸ್ಟಾರ್ಟ್‌ಅಪ್‌ಗಳಾದ ಐಟಿ ಸರ್ವಿಸ್, ಎಐ & ಎಂಎಲ್, ಐಒಟಿ, ಡಿಜಿಟಲ್ ಕಲಿಕೆ, ಮೊಬಿಲಿಟಿ, ಬ್ಲಾಕ್‌ಬೈನ್, ರೋಬೋ ಮತ್ತು ಡ್ರೋನ್, ಸೈಬರ್ ಸೆಕ್ಯೂರಿಟಿ, ಗೇಮಿಂಗ್, ಹೆಲ್ತ್‌ಟೆಕ್, ಫಿನ್‌ಟೆಕ್, ಸ್ಮಾರ್ಟ್‌ಟೆಕ್ ಮತ್ತು ಅಗ್ರಿಟೆಕ್ ಸೇರಿದಂತೆ ಇತ್ಯಾದಿ ಕ್ಷೇತ್ರಗಳ ಸ್ಟಾರ್ಟ್‌ಅಪ್‌ಗಳು ಭಾಗವಹಿಸಿದ್ದವು.
• ಆಸ್ಟ್ರೇಲಿಯಾ, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಜಪಾನ್, ಎನ್‌ಆರ್‌ಡಬ್ಲ್ಯೂಸಿಟಿ ಆಫ್ ಡಸೆಲ್ಡಾರ್ಫ್, ಥೈಲ್ಯಾಂಡ್, ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್, ಫಿನ್ಲ್ಯಾಂಡ್, ಇಸ್ರೇಲ್, ರಷ್ಯಾ ದೇಶದಿಂದ ಪ್ರತಿನಿಧಿಗಳು ಭಾಗಿಯಾಗಿದ್ದರು.
• ಶೈಕ್ಷಣಿಕ ಸಂಸ್ಥೆಗಳು- ಅಮಿಟಿ ವಿಶ್ವವಿದ್ಯಾಲಯ, ವಿಟಿಯು, ಮಣಿಪಾಲ್ ವಿಶ್ವವಿದ್ಯಾಲಯ, ಅಲಯನ್ಸ್ ವಿಶ್ವವಿದ್ಯಾಲಯ, ಗಾರ್ಡನ್ ಯೂನಿವರ್ಸಿಟಿ, ಪ್ರೆಸಿಡೆನ್ಸಿ ಯೂನಿವರ್ಸಿಟಿ ಇತ್ಯಾದಿ ಭಾಗವಹಿಸಿದ್ದರು.