ಬೆಂಗಳೂರು:ಸರ್ಕಾರಿ ನಿವಾಸಕ್ಕೆ ಹಾಲಿ ಹಾಗೂ ಮಾಜಿ ನಗರ ಪೊಲೀಸ್ ಆಯುಕ್ತರ ನಡುವೆ ಹಗ್ಗ, ಜಗ್ಗಾಟ ನಡೆಯುತ್ತಿದೆ.
ಸರ್ಕಾರಿ ನಿವಾಸಕ್ಕಾಗಿ ಹಾಲಿ ಹಾಗೂ ಮಾಜಿ ಪೊಲೀಸ್ ಆಯುಕ್ತರ ಜಟಾಪಟಿ
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮೀಸಲಿದ್ದ ನಿವಾಸಕ್ಕೆ ಸಂಬಂಧಪಟ್ಟಂತೆ ಹಾಲಿ ಹಾಗೂ ಮಾಜಿ ಪೊಲೀಸ್ ಆಯುಕ್ತರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.
ಮಾಜಿ ಹಾಗೂ ಹಾಲಿ ನಗರ ಪೊಲೀಸ್ ಆಯುಕ್ತರ ವಿವಾದ
ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ನೀಡುವ ಸರ್ಕಾರಿ ನಿವಾಸದಲ್ಲಿ ವಾಸವಿದ್ದಾರೆ. ಅಲೋಕ್ ಕುಮಾರ್ ಅವರು ನಗರ ಪೊಲೀಸ್ ಆಯುಕ್ತರ ಸ್ಥಾನದಿಂದ ಕೆಎಸ್ಆರ್ಪಿಯ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ.
ಆದರೆ, ಮನೆ ಖಾಲಿ ಮಾಡದ ಕಾರಣ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಮಿಷನರ್ಗೆ ಇರುವ ಮನೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲೋಕ್ ಕುಮಾರ್ ಅವರು ಈ ಮನೆಗೆ ಬಂದು ತಿಂಗಳು ಕಳೆದಿರುವುದರಿಂದ ಎರಡು ತಿಂಗಳ ಕಾಲ ಮನೆ ಬಿಡುವುದಕ್ಕೆ ಆಗಲ್ಲ ಎನ್ನುವ ಪ್ರಸ್ತಾವನೆ ಮಾಡಿದ್ದಾರೆ ಎನ್ನಲಾಗಿದೆ.