ಬೆಂಗಳೂರು: ಆ್ಯಂಬುಲೆನ್ಸ್ ಚಾಲಕರಿಗೆ ಜೀವ ರಕ್ಷಕರೆಂದು ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರು ಎಷ್ಟೇ ವೇಗವಾಗಿ ವಾಹನ ಚಲಾಯಿಸಿದರೂ, ಸಂಚಾರ ನಿಯಮ ಬ್ರೇಕ್ ಮಾಡಿದ್ರೂ ಕೂಡ ಕೇಸ್ ಹಾಕಲ್ಲ. ಇದನ್ನೇ ಕೆಲ ಆ್ಯಂಬುಲೆನ್ಸ್ ಚಾಲಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಿದ ಆ್ಯಂಬುಲೆನ್ಸ್ ಚಾಲಕ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಅವಾಂತರ ಸೃಷ್ಟಿಸಿದ್ದಾನೆ.
ಬುಧವಾರ ತಡರಾತ್ರಿ ನಗರದ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ, ಒಂದೇ ರಸ್ತೆಯಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.