ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಚಾಲದ ನಂಟು ಆರೋಪ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿಯರ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಇಂದು ಸಿಟಿಸಿವಿಲ್ ನ್ಯಾಯಾಲಯದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ನಟಿಮಣಿಯರ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ - Ragini's bail application
ಅರ್ಜಿ ವಿಚಾರಣೆ ವೇಳೆ ಸಿಸಿಬಿ ಪರ ನೇಮಕವಾಗಿರುವ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯಾವಕಾಶ ಕೇಳಿದ ಹಿನ್ನೆಲೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ನಟಿಯರ ಜೊತೆಗೆ ಮೂವರು ಆಪ್ತರ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಲಾಗಿದೆ.
ಡ್ರಗ್ಸ್ ಚಾಲದ ನಂಟು ಆರೋಪ: ನಟಿಯರ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆ
ಅರ್ಜಿ ವಿಚಾರಣೆ ವೇಳೆ ಸಿಸಿಬಿ ಪರ ನೇಮಕವಾಗಿರುವ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯಾವಕಾಶ ಕೇಳಿದ ಹಿನ್ನೆಲೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ನಟಿಯರ ಜೊತೆಗೆ ಮೂವರು ಆಪ್ತರ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಲಾಗಿದೆ. ಸದ್ಯ ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟಿಯರಿಗೆ ನಿರಾಸೆ ಮೂಡಿದೆ.
ಸೋಮವಾರದವರೆಗೂ ನಟಿ ಸಂಜನಾ ಹಾಗೂ ರಾಗಿಣಿಗೆ ಪರಪ್ಪನ ಆಗ್ರಹಾರದಲ್ಲಿಯೇ ದಿನ ದೂಡಬೇಕಿದೆ.